×
Ad

ಅಮೆರಿಕದ ಎನ್ ಬಿಎ ಗೆ ಆಯ್ಕೆಯಾದ ಪ್ರಪ್ರಥಮ ಭಾರತೀಯ

Update: 2017-01-15 22:47 IST

ಹೊಸದಿಲ್ಲಿ,ಜ.15: ‘ಎತ್ತರಕ್ಕೆ ಹೋದಷ್ಟೂ ಹೊಣೆಗಾರಿಕೆ ಹೆಚ್ಚುತ್ತದೆ ’ಇದು ಬರೋಬ್ಬರಿ ಏಳು ಅಡಿ ಎರಡು ಇಂಚು ಎತ್ತರವಿರುವ ಬಾಸ್ಕೆಟ್‌ಬಾಲ್ ಕ್ರೀಡಾಪಟು ಸತ್ನಾಮ್ ಸಿಂಗ್ ಭಮರಾ ಅವರ ನುಡಿ....
ಅಮೆರಿಕದ ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ ಮೊಟ್ಟಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದಾಗ ಭಮರಾ ಅವರ ವಯಸ್ಸು ಕೇವಲ 19 ವರ್ಷ! ಈಗ ಪಂಜಾಬ್‌ನ ಬರ್ನಾಲಾ ಜಿಲ್ಲೆಯ ಬಲ್ಲೋ ಕೆ ಎಂಬ ಪುಟ್ಟಗ್ರಾಮದಿಂದ ಅಮೆರಿಕಕ್ಕೆ ಅವರ ಪಯಣದ ಕುರಿತು ನೆಟ್‌ಫ್ಲಿಕ್ಸ್‌ನಲ್ಲಿ ‘ಒನ್ ಇನ್ ಎ ಬಿಲಿಯನ್ ’ಎಂಬ ಸಿನಿಮಾ ಬಂದಿದೆ.
ಹಲವಾರು ಎಮ್ಮಿ ಪ್ರಶಸ್ತಿಗಳ ಸರದಾರ ರೋಮನ್ ಗಾಕೊವಸ್ಕಿ ನಿರ್ದೇಶನದ 69 ನಿಮಿಷಗಳ ಅವಧಿಯ ಈ ಚಿತ್ರ ಈಗ 21ರ ಹರೆಯದ ಭಮರಾ ತನ್ನ ಹುಟ್ಟೂರಿಗೆ ಮರಳುವ ಮತ್ತು ಗ್ರಾಮಸ್ಥರು ಅವರನ್ನು ಸಂಭ್ರಮದಿಂದ ಸ್ವಾಗತಿಸುವ ದೃಶ್ಯದೊಂದಿಗೆ ಆರಂಭವಾಗುತ್ತದೆ.
ಹತ್ತು ವರ್ಷದ ಬಾಲಕನಾಗಿದ್ದಾಗ ಭಮರಾ ಎತ್ತರ 5 ಅಡಿ ಮತ್ತು 9 ಇಂಚು . ಅವರ ಎತ್ತರದ ಬಗ್ಗೆ ಕೆಲವರು ತಮಾಷೆ ಮಾಡುತ್ತಿದ್ದರು. ಇನ್ನು ಕೆಲವರು ಅವರ ಬೆಳವಣಿಗೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಭಮರಾ ತಂದೆ 7 ಅಡಿ 3 ಇಂಚು ಎತ್ತರವಿದ್ದರು. 

ಭಮರಾ ತಂದೆಯ ಗೆಳೆಯನ ಸಲಹೆ ಮೇರೆಗೆ ಬಾಸ್ಕೆಟ್ ಬಾಲ್ ಕ್ರೀಡೆಯ ತರಬೇತಿಗಾಗಿ ಲೂಧಿಯಾನ ಬಾಸ್ಕೆಟ್ ಬಾಲ್ ಅಕಾಡೆಮಿಗೆ ಸೇರ್ಪಡೆಯಾದರು.  ಆರಂಭದಲ್ಲಿ ಆತನಿಗೆ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಆಸಕ್ತಿ ಇರಲಿಲ್ಲ.
 ಭಮರಾ ಅವರು ದೊಡ್ಡ ಸಮಸ್ಯೆ ಎಂದರೆ ಅವರಿಗೆ ಕಾಲಿಗೆ ಹೊಂದುವ ಶೂಗಳು ಸಿಗುತ್ತಿಲ್ಲ. ಅವರು ಎರಡು ಶೂಗಳನ್ನು ಒಟ್ಟು ಸೇರಿಸಿ  ತಮ್ಮ ಪಾದಕ್ಕೆ ಸರಿ ಹೊಂದಿಸಿಕೊಂಡಿದ್ದಾರೆ. ಶೂ ಸಮಸ್ಯೆಯಿಂದ ಪಾರಾಗಲು ಹೆಚ್ಚಿನ ಸಂದರ್ಭ ಇವರು ಬರಿಗಾಲಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ.

ಭಮರಾ ಪ್ರಸ್ತುತ ಡಿ ಲೀಗ್ ನಲ್ಲಿ ಆಡುತ್ತಿದ್ದಾರೆ,  ಅವರು ಪ್ರಮುಖ ಗುರಿಯೆಂದರೆ ಮೊದಲನೆಯದಾಗಿ ತನ್ನ ಪ್ರದರ್ಶನದಲ್ಲಿ ಸುಧಾರಣೆಯಾವುದು. ಎರಡನೆ  ಉದ್ದೇಶ ಭಾರತದಲ್ಲಿ ಬಾಸ್ಕೇಟ್ ಬಾಲ್ ನ್ನು ಜನಪ್ರಿಯಗೊಳಿಸುವುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News