×
Ad

ವಿಕೆಟ್ ಕೀಪರ್ ಪೀಟರ್ ನೆವಿಲ್ ಮುಖಕ್ಕೆ ಬ್ಯಾಟ್ ಪೆಟ್ಟು...!

Update: 2017-01-16 22:12 IST

 ಮೆಲ್ಬೋರ್ನ್, ಜ.16: ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಬ್ಯಾಟ್ಸ್‌ಮನ್ ಬ್ರಾಡ್ ಹಾಡ್ಜ್ ಅವರು ಚೆಂಡನ್ನು ಎದುರಿಸುವ ಯತ್ನದಲ್ಲಿದ್ದಾಗ ಅವರ ಕೈ ಜಾರಿದ ಬ್ಯಾಟ್ ಆಸ್ಟ್ರೇಲಿಯದ ವಿಕೆಟ್ ಕೀಪರ್ ಪೀಟರ್ ನೆವಿಲ್ ಅವರ ಮುಖಕ್ಕೆ ಬಿದ್ದಿದೆ.

     ಸೋಮವಾರ ನಡೆದ ಬಿಗ್‌ಬ್ಯಾಶ್ ಟೂರ್ನಿಯ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ದಾಂಡಿಗ ಹಾಗೂ ನಾಯಕ ಬ್ರಾಡ್ ಹಾಡ್ಜ್ ಅವರು ಚೆಂಡನ್ನು ಎದುರಿಸುವ ಯತ್ನದಲ್ಲಿ ಅವರ ಬ್ಯಾಟ್ ಕೈ ಜಾರಿ ಹಿಂದಕ್ಕೆ ಹಾರಿತೆನ್ನಲಾಗಿದೆ. ಚೆಂಡನ್ನು ಗಮನಿಸುತ್ತಿದ್ದ ಆಡಿಲೇಡ್ ಸ್ಟ್ರೈಕರ್ಸ್‌ ತಂಡದ ವಿಕೆಟ್ ಕೀಪರ್ ಪೀಟರ್ ನೆವಿಲ್ ಅವರ ಮುಖಕ್ಕೆ ಬ್ಯಾಟ್ ಬಿದ್ದು ಗಂಭೀರ ಗಾಯವಾಗಿದೆ.

ಬ್ಯಾಟ್‌ನ ಪೆಟ್ಟು ಬಿದ್ದು ನೆವಿಲ್ ಕ್ರೀಸ್ ಬಳಿ ಕುಸಿದು ಬಿದ್ದರು. ಅವರನ್ನು ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನೆವಿಲ್ ಅವರ ಮುಖ ಊದಿಕೊಂಡಿದ್ದು, ದವಡೆಗೆ ಪೆಟ್ಟಾಗಿರುವುದು ಎಕ್ಸ್‌ರೇ ಮೂಲಕ ದೃಢಪಟ್ಟಿದೆ.

ನೆವಿಲ್ ಆಸ್ಟ್ರೇಲಿಯದ ಪರ 17 ಟೆಸ್ಟ್ ಹಾಗೂ 9 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News