×
Ad

ರಿಯಲ್ ಮ್ಯಾಡ್ರಿಡ್ ಅಜೇಯ ಗೆಲುವಿನ ಓಟಕ್ಕೆ ಸೆವಿಲ್ಲಾ ಕಡಿವಾಣ

Update: 2017-01-16 22:46 IST

 ಮ್ಯಾಡ್ರಿಡ್, ಜ.16: ಅತ್ಯಂತ ನಾಟಕೀಯವಾಗಿ ಸಾಗಿದ ಲಾ ಲಿಗ ಪಂದ್ಯದಲ್ಲಿ ಅಂತಿಮ ಐದು ನಿಮಿಷಗಳ ಆಟದಲ್ಲಿ ಎರಡು ಗೋಲು ಬಾರಿಸಿದ ಸೆವಿಲ್ಲಾ ತಂಡ ರಿಯಲ್ ಮ್ಯಾಡ್ರಿಡ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿತು. ಸತತ 40 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಬೀಗುತ್ತಿದ್ದ ಮ್ಯಾಡ್ರಿಡ್‌ಗೆ ಶಾಕ್ ನೀಡಿತು.

67ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ರಿಯಲ್ ಮ್ಯಾಡ್ರಿಡ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಆದರೆ, ಡಿಫೆಂಡರ್ ಸೆರ್ಜಿಯೊ ರಾಮೊಸ್ 85ನೆ ನಿಮಿಷದಲ್ಲಿ ತನ್ನದೇ ತಂಡದ ಗೋಲಿನ ಪೆಟ್ಟಿಗೆಗೆ ಗೋಲು ತಲುಪಿಸಿ ಎಡವಟ್ಟು ಮಾಡಿದ ಕಾರಣ ಪಂದ್ಯ 1-1 ರಿಂದ ಸಮಬಲಗೊಂಡಿತು. ಹೆಚ್ಚುವರಿ ಸಮಯದಲ್ಲಿ(90+1) ಗೆಲುವಿನ ಗೋಲು ಬಾರಿಸಿದ ಸ್ಟೀವನ್ ಜೊವೆಟಿಕ್ ಸೆವಿಲ್ಲಾ ತಂಡಕ್ಕೆ 2-1 ರೋಚಕ ಗೆಲುವು ತಂದರು.

ಈ ಗೆಲುವಿನ ಮೂಲಕ ಸೆವಿಲ್ಲಾ ತಂಡ ಲಾ ಲಿಗ ಅಂಕಪಟ್ಟಿಯಲ್ಲಿ ಬಾರ್ಸಿಲೋನವನ್ನು ಹಿಂದಿಕ್ಕಿ ಎರಡನೆ ಸ್ಥಾನ ಪಡೆದಿದೆ. ಮ್ಯಾಡ್ರಿಡ್ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಸೆವಿಲ್ಲಾ ತಂಡ ಕಳೆದ 9 ತಿಂಗಳಿಂದ ಎಲ್ಲ ಟೂರ್ನಿಗಳಲ್ಲಿ ಸತತ 40 ಕ್ಲಬ್ ಪಂದ್ಯಗಳನ್ನು ಗೆಲುವು ಸಾಧಿಸಿ ಸ್ಪಾನೀಶ್ ಲೀಗ್‌ನಲ್ಲಿ ದಾಖಲೆ ಬರೆದಿದ್ದ ಝೈನುದ್ದೀನ್ ಝೈದಾನ್ ಮಾರ್ಗದರ್ಶನದ ಮ್ಯಾಡ್ರಿಡ್‌ಗೆ ಆಘಾತ ನೀಡಿತು. ರಿಯಲ್ ಮ್ಯಾಡ್ರಿಡ್ 2012ರ ಬಳಿಕ ಮೊದಲ ಲಾ ಲಿಗ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News