×
Ad

ಯುವರಾಜ್ 14ನೆ ಶತಕ

Update: 2017-01-19 16:00 IST

ಕಟಕ್, ಜ.19: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ  ಎರಡನೆ ಏಕದಿನ ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್ 14ನೆ ಶತಕ ದಾಖಲಿಸಿದರು.

ಯುವರಾಜ್ 98 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು.

ಒಡಿಶಾದ ಕಟಕ್ ನ ಬಾರಾಬತಿ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಯುವರಾಜ್ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 

4.4 ಓವರ್ ಗಳಲ್ಲಿ 25 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತದ ಬ್ಯಾಟಿಂಗ್ ನ್ನು ಮುನ್ನೆಡೆಸಿ  35 ಓವರ್ ಗಳ ಮುಕ್ತಾಯಕ್ಕೆ ಭಾರತದ ಸ್ಕೋರ್ ನ್ನು 208ಕ್ಕೆ ತಲುಪಿಸಿದ್ದಾರೆ. ಯುವರಾಜ್ 108 ರನ್ ಮತ್ತು ಧೋನಿ 70 ರನ್ ಗಳಿಸಿ ಆಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News