2ನೆ ಏಕದಿನ : ಯುವರಾಜ್ 150 ; ಧೋನಿ 134; ಭಾರತ 381/ 6 ( 50 ಓವರ್)
ಕಟಕ್, ಜ.19:ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಆಲ್ ರೌಂಡರ್ ಯುವರಾಜ್ ಸಿಂಗ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ದಾಖಲಿಸಿದ ಶತಕದ ನೆರವಿನಲ್ಲಿ ಭಾರತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 381ರನ್ ಗಳಿಸಿದೆ.
ಯುವರಾಜ್ ಸಿಂಗ್ 295ನೆ ಏಕದಿನ ಪಂದ್ಯದಲ್ಲಿ 14ನೆ ಶತಕ ಪೂರ್ಣಗೊಳಿಸಿದರು. ಧೋನಿ 285ನೆ ಪಂದ್ಯದಲ್ಲಿ 10ನೆ ಶತಕ ಪೂರೈಸಿದರು..
ಯುವರಾಜ್ 98 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಶತಕ ಗಳಿಸಿದರು. ಧೋನಿ 106ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ ಶತಕ ಬಾರಿಸಿದ್ದಾರೆ.
ನಾಲ್ಕನೆ ವಿಕೆಟ್ ಗೆ ಯುವರಾಜ್ ಮತ್ತು ಧೋನಿ ಜೊತೆಯಾಟದಲ್ಲಿ ಭಾರತದ ಖಾತೆಗೆ 256 ರನ್ ಸೇರಿಸಿದರು.
ಯುವರಾಜ್ 150 ರನ್ (127ಎ, 21ಬೌ, 3ಸಿ) , ಧೋನಿ 134ರನ್ (122ಎ, 10ಬೌ, 6ಸಿ) ಮತ್ತು ಕೇದಾರ್ ಜಾಧವ್ 22 ರನ್ , ರಾಹುಲ್ 5 ರನ್, ಧವನ್ 11 ರನ್ ಮತ್ತು ಕೊಹ್ಲಿ 8 ರನ್ ಗಳಿಸಿ ಔಟಾದರು.
ರವೀಂದ್ರ ಜಡೇಜ ಔಟಾಗದೆ 16 ರನ್ ಮತ್ತು ಪಾಂಡ್ಯ ಔಟಾಗದೆ 19 ರನ್ ಗಳಿಸಿದರು.
ಇಂಗ್ಲೆಂಡ್ ನ ಬೌಲರ್ ಗಳಾದ ವೋಕ್ಸ್ 60ಕ್ಕೆ 4, ಪ್ಲಂಕೆಟ್ 91ಕ್ಕೆ 2 ವಿಕೆಟ್ ಪಡೆದರು.