ಭಾರತಕ್ಕೆ 15 ರನ್ ಗಳ ರೋಚಕ ಜಯ
ಕಟಕ್, ಜ.19: ಭಾರತ ಇಲ್ಲಿ ನಡೆದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 15 ರನ್‌ಗಳ ಜಯ ಗಳಿಸಿದ್ದು, ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಇನ್ನೂ 1 ಪಂದ್ಯ ಆಡಲು ಬಾಕಿ ಇರುವಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಬಾರಾಬತಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 382 ರನ್‌ಗಳ ಕಠಿಣ ಸವಾಲು ಪಡೆದ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 366 ರನ್ ಗಳಿಸಿತು.
ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲಿಸಿದ ಆಕರ್ಷಕ ಶತಕಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಗೆಲುವು ದಾಖಲಿಸಿದೆ.
ಇದರೊಂದಿಗೆ ಇಂಗ್ಲೆಂಡ್ ವಿರುದ್ಧ ಭಾರತ ಆಡಿದ ಕಳೆದ 24 ಏಕದಿನ ಪಂದ್ಯಗಳಲ್ಲಿ 20 ಪಂದ್ಯಗಳಲ್ಲಿ 20ನೆ ಜಯ ಸಂಪಾದಿಸಿದೆ.
ಇಂಗ್ಲೆಂಡ್‌ನ ಆಟಗಾರರಾದ ಜೇಸನ್ ರಾಯ್ (82), ಅಲೆಕ್ಸ್ ಹೇಲ್ಸ್(14), ಜೋ ರೂಟ್(54), ನಾಯಕ ಇಯಾನ್ ಮೊರ್ಗನ್( 102), ಬಟ್ಲರ್ (10) ಎಂ.ಎಂ ಅಲಿ(55) ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಇದರೊಂದಿಗೆ ಇಂಗ್ಲೆಂಡ್ ವಿರುದ್ಧ ಭಾರತ ಆಡಿದ ಕಳೆದ 24 ಏಕದಿನ ಪಂದ್ಯಗಳಲ್ಲಿ 20 ಪಂದ್ಯಗಳಲ್ಲಿ 20ನೆ ಜಯ ಸಂಪಾದಿಸಿದೆ.
ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತು ಮಾಜಿ ನಾಯಕ ಮಹೆಂದ್ರ ಸಿಂಗ್ ಧೋನಿ ಅವರ 256 ರನ್‌ಗಳ ಜೊತೆಯಾಟದ ನೆರವಿನಿಂದ ಭಾರತ ಇಂಗ್ಲೆಂಡ್‌ಗೆ ಕಠಿಣ ಸವಾಲನ್ನು ವಿಧಿಸಿತ್ತು.
ಸ್ಕೋರ್ ವಿವರ
ಭಾರತ: 50 ಓವರ್‌ಗಳಲ್ಲಿ 381/6
ಕೆಎಲ್ ರಾಹುಲ್ ಸಿ ಸ್ಟೋಕ್ಸ್ ಬಿ ವೋಕ್ಸ್ 05
ಧವನ್ ಬಿ ವೋಕ್ಸ್ 11
ವಿರಾಟ್ ಕೊಹ್ಲಿ ಸಿ ಸ್ಟೋಕ್ಸ್ ಬಿ ವೋಕ್ಸ್ 08
ಯುವರಾಜ್ ಸಿಂಗ್ ಸಿ ಬಟ್ಲರ್ ಬಿ ವೋಕ್ಸ್ 150
ಎಂಎಸ್ ಧೋನಿ ಸಿ ವಿಲ್ಲಿ ಬಿ ಪ್ಲ್ಲಂಕೆಟ್ 134
ಕೇದಾರ್ ಜಾಧವ್ ಸಿ ಬಾಲ್ ಬಿ ಪ್ಲ್ಲಂಕೆಟ್ 22
ಹಾರ್ದಿಕ್ ಪಾಂಡ್ಯ ಅಜೇಯ 19
ರವೀಂದ್ರ ಜಡೇಜ ಅಜೇಯ 16
ಇತರ 16
ವಿಕೆಟ್ ಪತನ: 1-14, 2-22, 3-25, 4-281, 5-323, 6-358
ಬೌಲಿಂಗ್ ವಿವರ:
ವೋಕ್ಸ್ 10-3-60-4
ವಿಲ್ಲಿ 5-0-32-0
ಬಾಲ್ 10-0-80-0
ಪ್ಲ್ಲಂಕೆಟ್ 10-1-91-2
ಸ್ಟೋಕ್ಸ್ 9-0-79-0
ಮೊಯಿನ್ ಅಲಿ 6-0-33-0
ಇಂಗ್ಲೆಂಡ್ 50 ಓವರ್‌ಗಳಲ್ಲಿ 366/8
ರಾಯ್ ಬಿ ಜಡೇಜ 82
ಹೇಲ್ಸ್ ಸಿ ಧೋನಿ ಬಿ ಬುಮ್ರಾ 14
ರೂಟ್ ಸಿ ಕೊಹ್ಲಿ ಬಿ ಅಶ್ವಿನ್ 54
ಮೋರ್ಗನ್ ರನೌಟ್ 102
ಸ್ಟೋಕ್ಸ್ ಬಿ ಅಶ್ವಿನ್ 01
ಬಟ್ಲರ್ ಸ್ಟಂ. ಧೋನಿ ಬಿ ಅಶ್ವಿನ್ 10
ಮೊಯಿನ್ ಅಲಿ ಬಿ ಕುಮಾರ್ 55
ವೋಕ್ಸ್ ಬಿ ಬುಮ್ರಾ 05
ಪ್ಲಂಕೆಟ್ ಅಜೇಯ 26
ವಿಲ್ಲಿ ಅಜೇಯ 05
ಇತರ 12
ವಿಕೆಟ್ ಪತನ: 1-28, 2-128, 3-170, 4-173, 5-206, 6-299, 7-304, 8-354
ಬೌಲಿಂಗ್ ವಿವರ:
ಬಿ.ಕುಮಾರ್ 10-1-63-1
ಜೆಜೆ ಬುಮ್ರಾ 9-0-81-2
ರವೀಂದ್ರ ಜಡೇಜ 10-0-45-1
ಪಾಂಡ್ಯ 6-0-60-0
ಅಶ್ವಿನ್ 10-0-63-3
ಕೇದಾರ್ ಜಾಧವ್ 5-0-45-0
ಪಂದ್ಯಶ್ರೇಷ್ಠ: ಯುವರಾಜ್ ಸಿಂಗ್.