ಮಲೇಷ್ಯಾ ಓಪನ್: ಸೈನಾ, ಜಯರಾಮ್‌ಗೆ ಮುನ್ನಡೆ
Update: 2017-01-19 23:55 IST
ಸಿಬು(ಮಲೇಷ್ಯಾ), ಜ.19: ಭಾರತದ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಅಜಯ್ ಜಯರಾಮ್ ಮಲೇಷ್ಯಾ ಮಾಸ್ಟರ್ಸ್ ಗ್ರಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇಲ್ಲಿನ ಸಿಬು ಒಳಾಂಗಣ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಸೈನಾ ಅವರು ಇಂಡೋನೇಷ್ಯಾದ ಹನ್ನಾ ರಾಮಾದಿನಿ ಅವರನ್ನು 42 ನಿಮಿಷಗಳ ಹೋರಾಟದಲ್ಲಿ 21-17, 21-12 ಸೆಟ್‌ಗಳ ಅಂತರದಿಂದ ಮಣಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಆರನೆ ಶ್ರೇಯಾಂಕದ ಜಯರಾಮ್ ಚೈನೀಸ್ ತೈಪೆಯ ಸೂ ಸುಯಾನ್‌ರನ್ನು 21-12, 15-21, 21-15 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಮಿಶ್ರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಜ್ವಾಲಾ ಗುಟ್ಟಾ ಜೋಡಿ ಆರನೆ ಶ್ರೇಯಾಂಕದ ಇಂಡೋನೇಷ್ಯಾದ ಟಿ.ಅಹ್ಮದ್ ಹಾಗೂ ಗಿಯೊರಿಯ ಇಮಾನುಯೆಲ್ ವಿರುದ್ಧ 18-21, 10-21 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.