×
Ad

ಈಡನ್ ಗಾರ್ಡನ್ಸ್ ನ ಒಂದು ಸ್ಟ್ಯಾಂಡ್ ಗೆ ಸೌರವ್ ಗಂಗುಲಿ ಹೆಸರು

Update: 2017-01-20 14:41 IST

ಕೋಲ್ಕತಾ, ಜ.20: ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ನ  ಆರು ಸ್ಟ್ಯಾಂಡ್ ಗಳಿಗೆ ಖ್ಯಾತ ಕ್ರೀಡಾಪಟುಗಳ ಮತ್ತು ಕ್ರೀಡಾ ಆಡಳಿತಗಾರರ ಹೆಸರಿನ್ನಿಡಲು ಆರ್ಮಿ ಒಪ್ಪಿಗೆ ನೀಡಿದೆ.
 ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ  ಜಗಮೋಹನ್ ದಾಲ್ಮಿಯಾ ಸೇರಿದಂತೆ 6 ಮಂದಿಯ   ಹೆಸರಿನ್ನಿಡಲು ನಿರ್ಧರಿಸಲಾಗಿದೆ ಎಂದು ಬಂಗಾಳ ಕ್ರಿಕೆಟ್  ಸಂಸ್ಥೆಯ ಮೂಲಗಳು ತಿಳಿಸಿವೆ. ಇತರ ನಾಲ್ಕು  ಸ್ಟ್ಯಾಂಡ್ ಗಳ ಹೆಸರು ಪಂಕಜ್ ರಾಯ್ ಮಾಜಿ ಕ್ರಿಕೆಟಿಗ , ಮಾಜಿ ಸಿಎಬಿ ಅಧ್ಯಕ್ಷರಾದ ಬಿ.ಎನ್ ದತ್, ಎಎನ್ ಘೋಷ್ ಮತ್ತು ಸ್ನೇಹಾಸ್ನಶು  ಆಚಾರ್ಯ 
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಂ ಆರ್ಮಿ ವಶದಲ್ಲಿದ್ದು, ಬಂಗಾಳ ಕ್ರಿಕೆಟ್ ಸಂಸ್ಥೆಯ  ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಳೆದ ವರ್ಷ  6 ಸ್ಟ್ಯಾಂಡ್ ಗಳಿಗೆ ಹೆಸರನ್ನು ಇಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News