ದಕ್ಷಿಣ ಆಫ್ರಿಕ ತಂಡಕ್ಕೆ ರೋಚಕ ಜಯ

Update: 2017-01-21 17:22 GMT

ಜೋಹಾನ್ಸ್‌ಬರ್ಗ್, ಜ.21: ಮಳೆ ಬಾಧಿತ ಪ್ರಥಮ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾವನ್ನು 19 ರನ್‌ಗಳ ಅಂತರದಿಂದ ಮಣಿಸಿತು.

ಮಳೆಯಿಂದಾಗಿ 10 ಓವರ್‌ಗಳಿಗೆ ಕಡಿತಗೊಂಡಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ 5 ವಿಕೆಟ್‌ಗಳ ನಷ್ಟಕ್ಕೆ 126 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 107ರನ್ ಗಳಿಸಲಷ್ಟೇ ಶಕ್ತವಾಯಿತು. ರೋಚಕ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕ 3 ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ದಕ್ಷಿಣ ಆಫ್ರಿಕದ ಪರ ಡೇವಿಡ್ ಮಿಲ್ಲರ್(40 ರನ್, 18 ಎಸೆತ) ಹಾಗೂ ನಾಯಕ ಫರ್ಹಾನ್ ಬೆಹಾರ್ದಿನ್(ಅಜೇಯ 31) ಎರಡಂಕೆ ಸ್ಕೋರ್ ದಾಖಲಿಸಿದರು. ಶ್ರೀಲಂಕಾದ ಹಿರಿಯ ವೇಗದ ಬೌಲರ್ ನುವಾನ್ ಕುಲಸೇಕರ(2-27) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News