ಲೋಧಾ ಸಮಿತಿಯ ಸುಧಾರಣೆ 50 ವರ್ಷ ಹಿಂದೆಯೇ ಬರಬೇಕಿತ್ತು: ಬೇಡಿ

Update: 2017-01-23 17:32 GMT

 ಜೈಪುರ, ಜ.23: ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಪಾರದರ್ಶಕತೆ ತರಲು ಲೋಧಾ ಸಮಿತಿ ಶಿಫಾರಸು ಮಾಡಿರುವ ಸುಧಾರಣೆಗಳು 50 ವರ್ಷಗಳ ಹಿಂದೆಯೇ ಜಾರಿಗೆ ಬರಬೇಕಾಗಿತ್ತು ಎಂದು ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟರು.

  ಕ್ರಿಕೆಟ್‌ನಲ್ಲಿ ಸುಪ್ರೀಂಕೋರ್ಟ್ ಪ್ರಾಮಾಣಿಕತೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಲೋಧಾ ಸಮಿತಿ ವರದಿ ಅತ್ಯಂತ ಮುಖ್ಯವಾಗುತ್ತದೆ. ಲೋಧಾ ಸಮಿತಿ ಈಗಾಗಲೆ ಮೊದಲ ಹೆಜ್ಜೆ ಇಟ್ಟಿದೆ. ಬಿಸಿಸಿಐ ಹಾಗೂ ರಾಜ್ಯ ಸಂಸ್ಥೆಗಳ ಕೆಲವು ಅಧಿಕಾರಿಗಳು ಲೋಧಾ ಸಮಿತಿ ಶಿಫಾರಸು ಮಾಡಿರುವ ಬದಲಾವಣೆಗೆ ಇನ್ನೂ ಒಗ್ಗಿಕೊಂಡಿಲ್ಲ. ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ರಾಜಕಾರಣಿಗಳೆಲ್ಲರೂ ಒಂದೇ. ಇವರು ಸಂಸತ್‌ನಲ್ಲಿ ಮಾತ್ರ ಭಿನ್ನಾಭಿಪ್ರಾಯ ಹೊಂದಿರುತ್ತಾರೆ, ಆದರೆ, ಕ್ರಿಕೆಟ್ ವಿಷಯದಲ್ಲಿ ಒಂದಾಗಿರುತ್ತಾರೆ. ರಹಸ್ಯವಾಗಿ ಕಾರ್ಯಾಚರಿಸುತ್ತಾರೆ. ಇನ್ನು ಕ್ರಿಕೆಟಿಗರು ಟೆಸ್ಟ್ ಆಡಲು ಬಯಸಿದ್ದರೂ ಅವರ ಒಂದು ಕಣ್ಣು ಹಾಗೂ ಕಿವಿ ಐಪಿಎಲ್‌ನತ್ತ ಇರುತ್ತದೆ ಎಂದು ಬೇಡಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News