14 ವರ್ಷಗಳ ಬಳಿಕ ವೀನಸ್ ವಿಲಿಯಮ್ಸ್ ಸೆಮಿಫೈನಲ್‌ಗೆ
Update: 2017-01-24 14:47 IST
ಮೆಲ್ಬೋರ್ನ್, ಜ.24: ಅಮೆರಿಕದ ಹಿರಿಯ ಟೆನಿಸ್ ಆಟಗಾರ್ತಿ, ಸೆರೆನಾರ ಹಿರಿಯ ಸಹೋದರಿ ವೀನಸ್ ವಿಲಿಯಮ್ಸ್ 14 ವರ್ಷಗಳ ಬಳಿಕ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.
ಇಲ್ಲಿನ ರಾಡ್ ಲಾವೆರ್ ಅರೆನಾದಲ್ಲಿ ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ 36ರ ಪ್ರಾಯದ ವೀನಸ್ ಅವರು 24ನೆ ರ್ಯಾಂಕಿನ ರಶ್ಯದ ಅನಸ್ತಾಸಿಯಾ ಪಾವ್ಲಚೆಂಕೋವಾರನ್ನು 6-4, 7-6(3) ಸೆಟ್‌ಗಳ ಅಂತರದಿಂದ ಮಣಿಸಿದರು.
‘‘ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಇಷ್ಟಕ್ಕೆ ತೃಪ್ತಿಪಡದೇ ಇನ್ನಷ್ಟು ಸಾಧನೆ ಮಾಡುವ ಉದ್ದೇಶಹಾಕಿಕೊಂಡಿರುವೆ. ನನಗೆ ಆಡಲು ಮತ್ತೊಂದು ಅವಕಾಶ ಲಭಿಸಿರುವುದಕ್ಕೆ ಸಂತೋಷವಾಗಿದೆ’’ಎಂದು ವಿಲಿಯಮ್ಸ್ ಹೇಳಿದ್ದಾರೆ.
13ನೆ ಶ್ರೇಯಾಂಕಿತೆ ವೀನಸ್ ಅಂತಿಮ ನಾಲ್ಕರ ಸುತ್ತಿನಲ್ಲಿ ಕೊಕೊ ವ್ಯಾಂಡ್‌ವೆಘ್ ಅಥವಾ ಗಾರ್ಬೈನ್ ಮುಗುರುಝರನ್ನು ಎದುರಿಸಲಿದ್ದಾರೆ.