ಪ್ರೊ.ಯು.ಆರ್.ರಾವ್ ಸೇರಿದಂತೆ 89 ಜನರಿಗೆ ಪದ್ಮ ಪ್ರಶಸ್ತಿಗಳು ಪ್ರಕಟ

Update: 2017-01-25 14:55 GMT

ಹೊಸದಿಲ್ಲಿ,ಜ.25: ದೇಶದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿರುವ ಪದ್ಮ ಪ್ರಶಸ್ತಿಗಳನ್ನು ಇಂದು ಘೋಷಿಸಲಾಗಿದೆ. ಖ್ಯಾತ ವಿಜ್ಞಾನಿ ಪ್ರೊ.ಯು.ಆರ್ ರಾವ್ ಮತ್ತು ಪ್ರಸಿದ್ಧ ಗಾಯಕ ಕೆ.ಜೆ.ಯೇಸುದಾಸ್ ಸೇರಿದಂತೆ ಏಳು ಜನರು ಪದ್ಮ ವಿಭೂಷಣ ಮತ್ತು ಖ್ಯಾತ ಸಂಗೀತಕಾರ ವಿಶ್ವಮೋಹನ್ ಭಟ್ ಸೇರಿದಂತೆ ಏಳು  ಜನರು ಪದ್ಮ ಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹಿರಿಯ ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್,ಗಾಯಕ ಕೈಲಾಷ್ ಖೇರ್,ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇರಿದಂತೆ 75 ಜನರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ. ಕರ್ನಾಟಕದ ಏಳು ಜನರು ಪದ್ಮಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.

ಕೆ.ಜೆ.ಯೇಸುದಾಸ್(ಸಂಗೀತ,ಕೇರಳ), ಸದ್ಗುರು ಜಗ್ಗಿ ವಾಸುದೇವ್ (ಆಧ್ಯಾತ್ಮ,ತಮಿಳುನಾಡು), ಶರದ್ ಪವಾರ್(ಸಾರ್ವಜನಿಕ ಕ್ಷೇತ್ರ,ಮಹಾರಾಷ್ಟ್ರ), ಮುರಳಿ ಮನೋಹರ ಜೋಶಿ(ಸಾರ್ವಜನಿಕ ಕ್ಷೇತ್ರ,ಉ.ಪ್ರದೇಶ), ಪ್ರೊ.ಉಡುಪಿ ರಾಮಚಂದ್ರ ರಾವ್(ವಿಜ್ಞಾನ ಮತ್ತು ಇಂಜಿನಿಯರಿಂಗ್,ಕರ್ನಾಟಕ), ಮರಣೋತ್ತರವಾಗಿ ಸುಂದರಲಾಲ್ ಪಟ್ವಾ(ಸಾರ್ವಜನಿಕ ಕ್ಷೇತ್ರ,ಮಧ್ಯಪ್ರದೇಶ) ಮತ್ತು ಪಿ.ಎ.ಸಂಗ್ಮಾ(ಸಾರ್ವಜನಿಕ ಕ್ಷೇತ್ರ,ಮೇಘಾಲಯ) ಅವರು ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ವಿಶ್ವಮೋಹನ ಭಟ್(ಸಂಗೀತ,ರಾಜಸ್ಥಾನ),ಪ್ರೊ.(ಡಾ.) ದೇವಿಪ್ರಸಾದ ದ್ವಿವೇದಿ (ಸಾಹಿತ್ಯಮತ್ತುಶಿಕ್ಷಣ,ಉ.ಪ್ರದೇಶ),ತೆಹೆಮ್ಟನ್ ಉದ್ವಾಡಿಯಾ (ವೈದ್ಯಕೀಯ,ಮಹಾರಾಷ್ಟ್ರ), ರತ್ನಸುಂದರ ಮಹಾರಾಜ್(ಆಧ್ಯಾತ್ಮ,ಗುಜರಾತ್),ಸ್ವಾಮಿ ನಿರಂಜನಾನಂದ ಸರಸ್ವತಿ(ಯೋಗ,ಬಿಹಾರ್) ,ರಾಜಕುಮಾರಿ ಮಹಾ ಚಕ್ರಿ ಸಿರಿಂಧರ್ನ್(ಸಾಹಿತ್ಯ ಮತ್ತು ಶಿಕ್ಷಣ,ಥಾಯ್ಲಂಡ್) ಮತ್ತು ಮರಣೋತ್ತರವಾಗಿ ದಿ.ಚೋ ರಾಮಸ್ವಾಮಿ(ಪತ್ರಿಕೋದ್ಯಮ) ಅವರು ಪದ್ಮ ಭೂಷಣ ಪ್ರಶಸಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕದ ಭಾರತಿ ವಿಷ್ಣುವರ್ಧನ್(ಸಿನಿಮಾ), ಸುಕ್ರಿ ಬೊಮ್ಮಗೌಡ(ಸಂಗೀತ), ಪ್ರೊ.ಜಿ.ವೆಂಕಟ ಸುಬ್ಬಯ್ಯ(ಸಾಹಿತ್ಯ ಮತ್ತು ಶಿಕ್ಷಣ),ಗಿರೀಶ ಭಾರದ್ವಾಜ್(ಸಾಮಾಜಿಕ ಕಾರ್ಯ),ಶೇಖರ ನಾಯ್ಕಾ (ಕ್ರಿಕೆಟ್)ಮತ್ತು ವಿಕಾಸ ಗೌಡ(ಡಿಸ್ಕಸ್ ಥ್ರೋ) ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಾರ್ಚ್-ಎಪ್ರಿಲ್‌ನಲ್ಲಿ ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪದ್ಮಪ್ರಶಸ್ತಿಗಳನ್ನು ಪ್ರದಾನಿಸ ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News