×
Ad

16 ಬಾರಿಯ ವಿಶ್ವ ಚಾಂಪಿಯನ್ ಗೆ ಅಭಿನಂದನೆ ಸಲ್ಲಿಸಿ ಮಂಗಳಾರತಿ ಮಾಡಿಸಿಕೊಂಡ ಕ್ರೀಡಾ ಸಚಿವ !

Update: 2017-01-26 17:37 IST

 ಹೊಸದಿಲ್ಲಿ, ಜ.26: ಈ ಬಾರಿ ಎಂಟು ಕ್ರೀಡಾಪಟುಗಳು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದರು. ಪದ್ಮಭೂಷಣ ವಂಚಿತ ಓರ್ವ ಕ್ರೀಡಾಪಟು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್‌ಗೆ ಟ್ವೆಟರ್ ಮೂಲಕ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

16 ಬಾರಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಪಡೆದಿರುವ  ಸ್ನೋಕರ್  ಹಾಗೂ ಬಿಲಿಯರ್ಡ್ಸ್ ವಿಶ್ಪ ಚಾಂಪಿಯನ್ ಕರ್ನಾಟಕದ ಪಂಕಜ್ ಅಡ್ವಾಣಿ ಅವರು ಕ್ರೀಡಾ ಸಚಿವರಿಗೆ ಟ್ವಿಟರ್‌ನಲ್ಲಿ ‘‘ ಧನ್ಯವಾದಗಳು ಸಾರ್. 16 ಬಾರಿ ವಿಶ್ವ ಚಾಂಪಿಯನ್ ಪ್ರಶಸ್ತಿ ಮತ್ತು ಎರಡು ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರೂ, ನನ್ನನ್ನು ಪದ್ಮಭೂಷಣ ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ. ಈ ಪುರಸ್ಕಾರಕ್ಕೆ ನಾನು ಇನ್ನೇನು ಮಾಡಬೇಕೆಂದು ಗೊತ್ತಿಲ್ಲ’’ ಎಂದು ಹೇಳಿದ್ದರು.

    ಇತ್ತೀಚೆಗೆ ಪುಣೆಯಲ್ಲಿ ನಡೆದ 28ನೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿದಾಗ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಅಡ್ವಾಣಿಗೆ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದರು. ‘‘ಗೆಲುವಿಗೆ ನೀವು ಇನ್ನೊಂದು ಹೆಸರಾಗಿದ್ದೀರಿ.ಮುಂದಿನ ಗೇಮ್ಸ್ /ಚಾಂಪಿಯನ್ಸ್‌ಶಿಪ್‌ಗೆ ನಿಮಗೆ ಶುಭ ಹಾರೈಕೆಗಳು’’ ಎಂದು ಹೇಳಿದ್ದರು.

ಈ ಬಾರಿ ಕ್ರೀಡಾ ರಂಗದ ಯಾರಿಗೂ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಸಿಗಲಿಲ್ಲ.    ಕ್ರೀಡಾರಂಗವನ್ನು ಕಡೆಗಣಿಸಲಾಗಿತ್ತು. ಕ್ರೀಡಾರಂಗದ ಎಂಟು ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ವಿರಾಟ್ ಕೊಹ್ಲಿ (ಕ್ರಿಕೆಟ್), ಶೇಖರ್ ನಾಯ್ಕ(ಕ್ರಿಕೆಟ್), ವಿಕಾಸ್ ಗೌಡ(ಡಿಸ್ಕಸ್), ದೀಪಾ ಮಲಿಕ್(ಅಥ್ಲೆಟಿಕ್ಸ್), ಮಾರಿಯಪ್ಪನ್ ತಂಗವೇಲು(ಅಥ್ಲೆಟಿಕ್ಸ್), ದೀಪಾ ಕರ್ಮಾಕರ್(ಜಿಮ್ನಾಸ್ಟಿಕ್), ಪಿ.ಆರ್.ಶ್ರೀಜೇಶ್ (ಹಾಕಿ),ಸಾಕ್ಷಿ ಮಲಿಕ್(ಕುಸ್ತಿ) ಪದ್ಮಶ್ರೀ ಪುರಸ್ಕಾರ ಪಡೆದವರು.

ಅಡ್ವಾಣಿ ಸ್ನೋಕರ್ ಮತ್ತು ಬಿಲಿಯರ್ಡ್ಸ್‌ನಲ್ಲಿ ಅನನ್ಯ ಸಾಧನೆ ಮಾಡಿದ ಭಾರತದ ನಂ.1 ಆಟಗಾರ. 2006ರಲ್ಲಿ 2010ರ ಏಶ್ಯನ್ ಗೇಮ್ಸ್‌ನಲ್ಲಿ ಅಡ್ವಾಣಿ ಚಿನ್ನ ಜಯಿಸಿದ್ದರು.

,,,,

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News