ಅಂಗ್ಲರ ಗೆಲುವಿಗೆ ನೆರವಾದ ಅಲಿ

Update: 2017-01-26 18:02 GMT

ಕಾನ್ಪುರ, ಜ.26: ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.

ಗೆಲುವಿಗೆ 148 ರನ್‌ಗಳ ಗೆಲುವಿನ ಸವಾಲು ಪಡೆದ ಇಂಗ್ಲೆಂಡ್ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ದಾಖಲಿಸಿತು. ನಾಯಕ ಇಯಾನ್ ಮೊರ್ಗನ್ 51 ರನ್ ಮತ್ತು ಜೋ ರೂಟ್ ಔಟಾಗದೆ 46 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇನಿಂಗ್ಸ್ ಆರಂಭಿಸಿದ ಜೇಸನ್ ರಾಯ್ ಮತ್ತು ಬಿಲ್ಲಿಂಗ್ಸ್ ಮೊದಲ ವಿಕೆಟ್‌ಗೆ 3.2 ಓವರ್‌ಗಳಲ್ಲಿ 42 ರನ್‌ಗಳ ಜೊತೆಯಾಟ ನೀಡಿ ಉತ್ತಮ ಅಡಿಪಾಯ ಹಾಕಿ ಕೊಟ್ಟರು. 19 ರನ್ ಗಳಿಸಿದ ರಾಯ್ ಅವರು ಚಾಹಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಅದೇ ಓವರ್‌ನ ಐದನೆ ಎಸೆತದಲ್ಲಿ ಬಿಲ್ಲಿಂಗ್ಸ್ ಅವರು ಚಾಹಲ್‌ಗೆ ವಿಕೆಟ್ ಒಪ್ಪಿಸಿದರು. ಬಿಲ್ಲಿಂಗ್ಸ್ 22 ರನ್(10ಎ, 3ಬೌ,1ಸಿ) ಗಳಿಸಿದರು.

  ಮೂರನೆ ವಿಕೆಟ್‌ಗೆ ನಾಯಕ ಇಯಾನ್ ಮೊರ್ಗನ್ ಮತ್ತು ಜೋ ರೂಟ್ 83 ರನ್‌ಗಳ ಜೊತೆಯಾಟ ನೀಡಿದರು. 15.2ನೆ ಓವರ್‌ನಲ್ಲಿ ನಾಯಕ ಮೊರ್ಗನ್ ಪರ್ವೆಝ್ ರಸೂಲ್ ಎಸೆತದಲ್ಲಿ ಸುರೇಶ್ ರೈನಾಗೆ ಕ್ಯಾಚ್ ನೀಡಿದರು. ಚೊಚ್ಚಲ ಟ್ವೆಂಟಿ-20 ಪಂದ್ಯವನ್ನಾಡಿದ ಪರ್ವೆಝ್ ರಸೂಲ್ ಇದರೊಂದಿಗೆ ಮೊದಲ ವಿಕೆಟ್‌ನ್ನು ತನ್ನ ಖಾತೆಗೆ ಸೇರಿಸಿಕೊಂಡರು. ಮೊರ್ಗನ್ 51ರನ್(38ಎ, 1ಬೌ,4ಸಿ) ಗಳಿಸಿದರು.ಮೊರ್ಗನ್ 64ನೆ ಪಂದ್ಯದಲ್ಲಿ 7ನೆ ಅರ್ಧಶತಕ ದಾಖಲಿಸಿದರು. ಜೋ ರೂಟ್ 46 ರನ್(46ಎ, 4ಬೌ) ಮತ್ತು ಬೆನ್ ಸ್ಟೋಕ್ಸ್ 2 ರನ್ ಗಳಿಸಿ ಔಟಾಗದೆ ಉಳಿದರು.
ಭಾರತದ ಪರ ಚಾಹಲ್ 27ಕ್ಕೆ 2 ವಿಕೆಟ್ ಮತ್ತು ಪರ್ವೆಝ್ ರಸೂಲ್ 32ಕ್ಕೆ 1 ವಿಕೆಟ್ ಪಡೆದರು. ನೆಹ್ರಾ ಬುಮ್ರಾ, ರೈನಾ ಮತ್ತು ಪಾಂಡ್ಯ ಕೈ ಸುಟ್ಟುಕೊಂಡರು.
ಭಾರತ 147/7: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡ
ಇಂಗ್ಲೆಂಡ್‌ನ ಮಿಲ್ಸ್, ಜೋರ್ಡನ್, ಪ್ಲೆಂಕಟ್, ಸ್ಟೋಕ್ಸ್ ಮತ್ತು ಮೊಯಿನ್ ಅಲಿ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 147 ರನ್ ಗಳಿಸಿತು.
  ಮಾಜಿ ನಾಯಕ ಮಹೆಂದ್ರ ಸಿಂಗ್ ಧೋನಿ ಔಟಾಗದೆ 36 ರನ್(27ಎ, 3ಬೌ) ಗಳಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರನ್ನು ಹೊರತುಪಡಿಸಿದರೆ ಸುರೇಶ್ ರೈನಾ 34 ರನ್ (23ಎ, 4ಬೌ,1ಸಿ) ಗಳಿಸಿದರು.
 ನಾಯಕ ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸಿದ ಲೋಕೇಶ್ ರಾಹುಲ್ (8) ತನ್ನ ವೈಫಲ್ಯವನ್ನು ಮುಂದುವರಿಸಿದರು. ಅವರು ಜೊರ್ಡನ್ ಎಸೆತದಲ್ಲಿ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ವಿರಾಟ್ 7.1ನೆ ಓವರ್‌ನಲ್ಲಿ ಅಲಿ ಎಸೆತದಲ್ಲಿ ಮೊರ್ಗನ್‌ಗೆ ಕ್ಯಾಚ್ ನೀಡಿದರು.
 
ಯುವರಾಜ್ ಸಿಂಗ್ 12 ರನ್ ಗಳಿಸಿದರು. ಮನೀಷ್ ಪಾಂಡೆ(3) ಮತ್ತು ಹಾರ್ದಿಕ್ ಪಾಂಡ್ಯ (9) ವಿಫಲರಾದರು. ಇಂಗ್ಲೆಂಡ್ ತಂಡದ ಎಂಎಂ ಅಲಿ 21ಕ್ಕೆ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರದಾದರು. ಮಿಲ್ಸ್, ಜೋರ್ಡನ್, ಪ್ಲಂಕೆಟ್, ಸ್ಟೋಕ್ಸ್ ತಲಾ 1 ವಿಕೆಟ್ ಪಡೆದರು.

ಸ್ಕೋರ್ ಪಟ್ಟಿ
ಭಾರತ 20 ಓವರ್‌ಗಳಲ್ಲಿ 147/7
ವಿರಾಟ್ ಕೊಹ್ಲಿ ಸಿ ಮೊರ್ಗನ್ ಬಿ ಅಲಿ 29
ಕೆ.ಎಲ್.ರಾಹುಲ್ ಸಿ ರಶೀದ್ ಬಿ ಜೋರ್ಡನ್ 08
ರೈನಾ ಬಿ ಸ್ಟ್ರೋಕ್ಸ್34
ಯುವರಾಜ್ ಸಿಂಗ್‌ಸಿ ರಶೀದ್ ಬಿ ಪ್ಲಂಕೆಟ್12
ಎಂಎಸ್ ಧೋನಿ ಔಟಾಗದೆ36
ಮನೀಷ್ ಪಾಂಡೆ ಎಲ್‌ಬಿಡಬ್ಲು ಬಿ ಅಲಿ03
ಹಾರ್ದಿಕ್ ಪಾಂಡ್ಯ ಸಿ ಬಿಲ್ಲಿಂಗ್ಸ್ ಬಿ ಮಿಲ್ಸ್09
ಪರ್ವೇಝ್ ರನೌಟ್(ಮೊರ್ಗನ್/ಜೋರ್ಡನ್)05
ಬುಮ್ರಾಔಟಾಗದೆ00
ಇತರೆ11

ವಿಕೆಟ್ ಪತನ: 1-34, 2-55, 3-75, 4-95, 5-98, 6-118, 7-145,

ಬೌಲಿಂಗ್ ವಿವರ
        ಮಿಲ್ಸ್4-0-27-1
    ಜೋರ್ಡನ್ 4-0-27-1
        ಪ್ಲಂಕೆಟ್4-0-32-1
        ಸ್ಟೋಕ್ಸ್ 4-0-37-1
    ಎಂಎಂ ಅಲಿ4-0-21-2

ಇಂಗ್ಲೆಂಡ್ 18.1 ಓವರ್‌ಗಳಲ್ಲಿ 148/3
 ಜೇಸನ್ ರಾಯ್ ಬಿ ಚಾಹಲ್19
ಬಿಲ್ಲಿಂಗ್ಸ್‌ಬಿ ಚಾಹಲ್22
ಜೋ ರೂಟ್ ಔಟಾಗದೆ46
ಮೊರ್ಗನ್ ಸಿ ರೈನಾ ಬಿ ರಸೂಲ್51
ಸ್ಟೋಕ್ಸ್ ಔಟಾಗದೆ02
 ಇತರೆ08
ವಿಕೆಟ್ ಪತನ: 1-42, 2-43, 3-126
ಬೌಲಿಂಗ್ ವಿವರ
ಆಶೀಶ್ ನೆಹ್ರಾ 3.0-0-31-0
ಬುಮ್ರಾ3.1-0-26-0
 ಚಾಹಲ್4.0-0-27-2
 ರಸೂಲ್4.0-0-32-1
 ರೈನಾ2.0-0-17-0
 ಪಾಂಡ್ಯ2.0-0-12-0

    
,,,,,,,,,


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News