ಮೊದಲ ಏಕದಿನ: ದಕ್ಷಿಣ ಆಫ್ರಿಕಕ್ಕೆ 8 ವಿಕೆಟ್ ಜಯ
ಪೋರ್ಟ್ ಎಲಿಜಬೆತ್, ಜ.28: ಸ್ಪಿನ್ನರ್ ಇಮ್ರಾನ್ ತಾಹಿರ್(3-26) ಹಾಗೂ ವೇಗದ ಬೌಲರ್ ವೇಯ್ನಾ ಪಾರ್ನೆಲ್(3-48) ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‌ಳ ಅಂತರದಿಂದ ಸೋತಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಕುಶಾಲ್ ಮೆಂಡಿಸ್‌ರ(62) ಏಕಾಂಗಿ ಹೋರಾಟದ ಹೊರತಾಗಿಯೂ 48.3 ಓವರ್‌ಗಳಲ್ಲಿ 181 ರನ್‌ಗೆ ಆಲೌಟಾಯಿತು.
ಗೆಲ್ಲಲು ಸುಲಭ ಸವಾಲು ಪಡೆದ ದಕ್ಷಿಣ ಆಫ್ರಿಕ 34.2 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 185 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಆಫ್ರಿಕದ ಪರ ಕುಕ್ ಹಾಗೂ ಅಮ್ಲ(57) ಮೊದಲ ವಿಕೆಟ್‌ಗೆ 71 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ನಾಯಕ ಎಫ್‌ಡು ಪ್ಲೆಸಿಸ್(ಅಜೇಯ 55) ಹಾಗೂ ಎಬಿಡಿ ವಿಲಿಯರ್ಸ್(ಅಜೇಯ 30) 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 54 ರನ್ ಸೇರಿಸಿ ತಂಡಕ್ಕೆ ಭರ್ಜರಿ ಜಯ ತಂದರು.
ಬೌಲಿಂಗ್‌ನಲ್ಲಿ ಮಿಂಚಿದ ಆಫ್-ಸ್ಪಿನ್ನರ್ ಇಮ್ರಾನ್ ತಾಹಿರ್(3-26) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 48.3 ಓವರ್‌ಗಳಲ್ಲಿ 181 ರನ್‌ಗೆ ಆಲೌಟ್
(ಮೆಂಡಿಸ್ 62, ಡಿಸಿಲ್ವಾ 28, ತಾಹಿರ್ 3-26, ಪಾರ್ನೆಲ್ 3-48)
ದ.ಆಫ್ರಿಕ: 34.2 ಓವರ್‌ಗಳಲ್ಲಿ 185/2
(ಎಫ್‌ಡು ಪ್ಲೆಸಿಸ್ ಅಜೇಯ 55, ಅಮ್ಲ 57, ಡಿವಿಲಿಯರ್ಸ್ ಅಜೇಯ 30, ಕುಕ್ 34, ಗುಣರತ್ನೆ 1-19)
ಪಂದ್ಯಶ್ರೇಷ್ಠ: ಇಮ್ರಾನ್ ತಾಹಿರ್.