ಐಸಿಸಿ ಸಭೆಗೆ ಬಿಸಿಸಿಐ ಪ್ರತಿನಿಧಿಗಳಾಗಿ ಅಮಿತಾಭ್, ಅನಿರುದ್ಧ್ ಆಯ್ಕೆ ಸಾಧ್ಯತೆ

Update: 2017-01-28 18:04 GMT

ಹೊಸದಿಲ್ಲಿ, ಜ.28: ದುಬೈನಲ್ಲಿ ಫೆ.4-5ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ತನ್ನ ಪ್ರತಿನಿಧಿಗಳಾಗಿ ಜೊತೆ ಕಾರ್ಯದರ್ಶಿ ಅಮಿತಾಭ್ ಚೌಧರಿ ಹಾಗೂ ಖಜಾಂಚಿ ಅನಿರುದ್ಧ್ ಚೌಧರಿ ಹೆಸರನ್ನು ಬಿಸಿಸಿಐ ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆಯಿದೆ.

ಬಿಸಿಸಿಐ ಅಂಗಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್‌ಸಿಬಲ್‌ಗೆ ಮೂವರು ಆಡಳಿತಾಧಿಕಾರಿಗಳ ಹೆಸರನ್ನು ಸೂಚಿಸುವಂತೆ ಸುಪ್ರೀಂಕೋರ್ಟ್ ತನ್ನ ಇತ್ತೀಚೆಗಿನ ತೀರ್ಪಿನಲ್ಲಿ ತಿಳಿಸಿತ್ತು.

ಕ್ರಿಕೆಟ್ ಆಡಳಿತಾಧಿಕಾರಿಯ ವಯಸ್ಸು 70 ವರ್ಷ ಮೀರಿರಬಾರದು ಎಂದು ಆದೇಶಿಸಿರುವ ಸುಪ್ರೀಂಕೋರ್ಟ್ ರಾಜಕಾರಿಣಿ ಶರದ್‌ಪವಾರ್ ಮತ್ತೊಮ್ಮೆ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆಯನ್ನು ತಳ್ಳಿ ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News