ಎರಡನೆ ಟ್ವೆಂಟಿ-20 ಪಂದ್ಯ: ಭಾರತಕ್ಕೆ 5 ರನ್‌ಗಳ ರೋಚಕ ಜಯ
ನಾಗ್ಪುರ, ಜ.29: ಭಾರತ ಇಲ್ಲಿ ನಡೆದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಇಂಗ್ಲೆಂಡ್‌ನ ವಿರುದ್ಧ 5 ರನ್‌ಗಳ ರೋಚಕ ಜಯ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 145 ರನ್‌ಗಳ ಸವಾಲು ಪಡೆದಿದ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 139 ರನ್ ಗಳಿಸಿತು.
ಇಂಗ್ಲೆಂಡ್‌ನ ಜೇಸನ್ ರಾಯ್(10), ಬಿಲ್ಲಿಂಗ್ಸ್(12), ರೂಟ್(38), ಮೊರ್ಗನ್(17), ಸ್ಟೋಕ್ಸ್(38), ಬಟ್ಲರ್(15) ಎರಡಂಕೆಯ ಕೊಡುಗೆ ನೀಡಿದರೂ ತಂಡಕ್ಕೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.
ಆಶಿಶ್ ನೆಹ್ರಾ(28ಕ್ಕೆ 3), ಜಸ್‌ಪ್ರೀತ್ ಬುಮ್ರಾ(20ಕ್ಕೆ 2) ಮತ್ತು ಅಮಿತ್ ಮಿಶ್ರಾ(25ಕ್ಕೆ1) ದಾಳಿಗೆ ಸಿಲುಕಿ ಇಂಗ್ಲೆಂಡ್ ಗೆಲುವಿನ ಹಾದಿಯಲ್ಲಿ ಎಡವಿದೆ.
ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ನ ಗೆಲುವಿಗೆ 8 ರನ್ ಗಳಿಸಬೇಕಿತ್ತು. ಆದರೆ ಜಸ್‌ಪ್ರೀತ್ ಬುಮ್ರಾ ಆ ಓವರ್‌ನಲ್ಲಿ ಕೇವಲ 2 ರನ್ ನೀಡಿದರು. ಬಟ್ಲರ್ ಮತ್ತು ರೂಟ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿ ಭಾರತಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಭಾರತ 144/8:ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 144 ರನ್ ಗಳಿಸಿದೆ. ಕರ್ನಾಟಕದ ಕೆ.ಎಲ್.ರಾಹುಲ್ (71) ಮನೀಷ್ ಪಾಂಡೆ (30) ಮತ್ತು ವಿರಾಟ್ ಕೊಹ್ಲಿ (21) ಇವರ ನೆರವಿನಲ್ಲಿ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ಇಂಗ್ಲೆಂಡ್‌ನ ಜೋರ್ಡನ್ ಪ್ರಹಾರಕ್ಕೆ ಸಿಲುಕಿದ ಭಾರತದ ಮಧ್ಯಮ ಸರದಿಯ ದಾಂಡಿಗರು ಕಳಪೆ ಪ್ರದರ್ಶನ ನೀಡಿದರು. ಜೋರ್ಡನ್ 3 ವಿಕೆಟ್, 1 ಕ್ಯಾಚ್‌ಮತ್ತು 2 ರನೌಟ್ ಮಾಡಿ ಭಾರತದ ಸ್ಕೋರ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಹುಲ್ 17.2 ಓವರ್‌ನಲ್ಲಿ ಜೋರ್ಡನ್ ಎಸೆತದಲ್ಲಿ ಸ್ಟೋಕ್ಸ್‌ಗೆ ಕ್ಯಾಚ್ ನೀಡಿದರು.ಆಗ ತಂಡದ ಸ್ಕೋರ್ 4 ವಿಕೆಟ್ ನಷ್ಟದಲ್ಲಿ 125 ಆಗಿತ್ತು. ಏಕದಿನ ಸರಣಿ ಮತ್ತು ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರಾಹುಲ್ ಇಂದು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.. 47 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 71 ರನ್ ಸೇರಿಸಿದರು. ಇವರನ್ನು ಹೊರತುಪಡಿಸಿದರೆ. ಕರ್ನಾಟಕದ ಮನೀಷ್ ಪಾಂಡೆ 26 ಎಸೆತಗಳನ್ನು ಎದುರಿಸಿ 30 ರನ್‌ಗಳ ಕೊಡುಗೆ ನೀಡಿದರು.
ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಮತ್ತು ಲೋಕೇಶ್ ರಾಹುಲ್ ಮೊದಲ ವಿಕೆಟ್‌ಗೆ 30 ರನ್‌ಗಳ ಕೊಡುಗೆ ನೀಡಿದರು.ಕೊಹ್ಲಿ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 21 ರನ್ ಗಳಿಸಿದರು. ಅಗ್ರ ಸರದಿಯ ಆಟಗಾರರು ಉತ್ತವ ರನ್‌ರೇಟ್ ಕಾಯ್ದುಕೊಳ್ಳಲಿಲ್ಲ. ಇದರಿಂದಾಗಿ ಮಧ್ಯಮ ಸರದಿಯ ಬ್ಯಾಟ್ಸ್‌ಮನ್‌ಗಳು ಒತ್ತಡಕ್ಕೊಳಗಾಗಿ ವಿಕೆಟ್ ಕೈ ಚೆಲ್ಲಿದರು. ಮೊದಲ 4 ಓವರ್‌ಗಳಲ್ಲಿ 30 ರನ್ ದಾಖಲಾಗಿತ್ತು.
5ನೆ ಓವರ್‌ನ ಮೊದಲ ಎಸೆತದಲ್ಲಿ ಜೋರ್ಡನ್ ಅವರು ಕೊಹ್ಲಿಗೆ ಪೆವಿಲಿಯನ್ ಹಾದಿ ತೋರಿಸಿದರು.ಬಳಿಕ ಕ್ರೀಸ್‌ಗೆ ಆಗಮಿಸಿದ ಸುರೇಶ್ ರೈನಾ(7) ಕಳಪೆ ಪ್ರದರ್ಶನ ನೀಡಿದರು. ಇವರ ಹಾದಿಯನ್ನೇ ಯುವರಾಜ್ ಸಿಂಗ್ ಅನುಸರಿಸಿದರು.4 ರನ್ ಗಳಿಸಲು 12 ಎಸೆತಗಳನ್ನು ಎದುರಿಸಿದರು.ಅವರನ್ನು ಮೊಯಿನ್ ಅಲಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಮಹೇಂದ್ರ ಸಿಂಗ್ ಧೋನಿ(5) ಅವರು ಜೋರ್ಡನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.ಅಮಿತ್ ಮಿಶ್ರಾ(0) ಖಾತೆ ತೆರೆಯುವ ಮೊದಲೇ ರನೌಟಾದರು.
ಇಂಗ್ಲೆಂಡ್ ತಂಡದ ಜೋರ್ಡನ್ 22ಕ್ಕೆ 3 ವಿಕೆಟ್ ಪಡೆದರು. ಮಿಲ್ಸ್,ಅಲಿ ಮತ್ತು ರಶೀದ್ ತಲಾ 1 ವಿಕೆಟ್ ಹಂಚಿಕೊಂಡರು.
ಸ್ಕೋರ್ ಪಟ್ಟಿ
ಭಾರತ 20 ಓವರ್‌ಗಳಲ್ಲಿ 144/8
ವಿರಾಟ್ ಕೊಹ್ಲಿ ಸಿ ಡಾವ್ಸನ್‌ಬಿ ಜೊರ್ಡನ್ 21
ರಾಹುಲ್ ಸಿ ಸ್ಟೋಕ್ಸ್ ಬಿ ಜೋರ್ಡನ್71
ಸುರೇಶ್ ರೈನಾ ಸಿ ಜೋರ್ಡನ್ ಬಿ ರಶೀದ್ 07
ಯುವರಾಜ್ ಸಿಂಗ್ ಎಲ್‌ಬಿಡಬ್ಲು ಬಿ ಅಲಿ 04
ಮನೀಷ್ ಪಾಂಡೆ ಬಿ ಮಿಲ್ಸ್30
ಎಂಎಸ್ ಧೋನಿ ಬಿ ಜೊರ್ಡನ್ 05
ಹಾರ್ದಿಕ್ ಪಾಂಡ್ಯ ರನೌಟ್(ಜೋರ್ಡನ್)02
ಅಮಿತ್ ಮಿಶ್ರಾ ರನೌಟ್(ಅಲಿ/ಜೋರ್ಡನ್)00
ಬುಮ್ರಾ ಔಟಾಗದೆ00
ಇತರೆ04
ವಿಕೆಟ್ ಪತನ: 1-30, 2-56, 3-69, 4-125, 5-139, 6-143, 7-144, 8-144
ಬೌಲಿಂಗ್ ವಿವರ
ಡಾವ್ಸನ್ 2-0-20-0
ಮಿಲ್ಸ್4-0-36-1
ಜೋರ್ಡನ್4-0-22-3
ಸ್ಟೋಕ್ಸ್3-0-21-0
ಎಂಎಂ ಅಲಿ4-0-20-1
ರಶೀದ್ 3-0-24-1
ಇಂಗ್ಲೆಂಡ್ 20 ಓವರ್‌ಗಳಲ್ಲಿ 139/6
ರಾಯ್ ಸಿ ರೈನಾ ಬಿ ನೆಹ್ರಾ 10
ಬಿಲ್ಲಿಂಗ್ಸ್‌ಸಿ ಬುಮ್ರಾ ಬಿ ನೆಹ್ರಾ 12
ರೂಟ್ ಎಲ್‌ಬಿಡಬ್ಲು ಬಿ ಬುಮ್ರಾ38
ಮೊರ್ಗನ್ ಸಿ ಪಾಂಡ್ಯ ಬಿ ಮಿಶ್ರಾ 17
ಸ್ಟೋಕ್ಸ್ ಸಿ ಎಲ್‌ಬಿಡಬ್ಲು ಬಿ ಮಿಶ್ರಾ 38
ಬಟ್ಲರ್ ಬಿ ಬುಮ್ರಾ 15
ಅಲಿ ಔಟಾಗದೆ01
ಜೋರ್ಡನ್ ಔಟಾಗದೆ00
ಇತರೆ 08
ವಿಕೆಟ್ ಪತನ:1-22, 2-22,3-65, 4-117, 5-137, 6-138
ಬೌಲಿಂಗ್ ವಿವರ
ಚಾಹಲ್4-0-33-0
ನೆಹ್ರಾ4-0-28-3
ಬುಮ್ರಾ4-0-20-2
ಮಿಶ್ರಾ4-0-25-1
ರೈನಾ4-0-30-0