×
Ad

ಸ್ವಾನ್ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಸಚಿನ್

Update: 2017-01-31 23:50 IST

 ಲಂಡನ್, ಜ.31: ಸಚಿನ್ ತೆಂಡುಲ್ಕರ್ ತಾನು ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಬಣ್ಣಿಸಿರುವ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ತಾನು ಆಯ್ಕೆ ಮಾಡಿರುವ ಸಾರ್ವಕಾಲಿಕ ಶ್ರೇಷ್ಠ 11 ಆಟಗಾರರ ಪಟ್ಟಿಯಲ್ಲಿ ಸಚಿನ್‌ರನ್ನು ಆಯ್ಕೆ ಮಾಡಿದ್ದಾರೆ. ಸಚಿನ್ ಅವರು ಸ್ವಾನ್ ಆಯ್ಕೆ ಮಾಡಿರುವ ಶ್ರೇಷ್ಠ ತಂಡದಲ್ಲಿರುವ ಏಕೈಕ ಭಾರತೀಯನಾಗಿದ್ದಾರೆ.

ಸ್ವಾನ್ ಅವರ ಕನಸಿನ ತಂಡದಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮಾತ್ರ ಸಕ್ರಿಯ ಆಟಗಾರನಾಗಿದ್ದಾರೆ. ಉಳಿದವರು ಮಾಜಿಗಳು.

 ಸ್ವಾನ್ ತಂಡದಲ್ಲಿ ನಾಲ್ವರು ಆಸ್ಟ್ರೇಲಿಯನ್ನರು(ಡಾನ್ ಬ್ರಾಡ್ಮನ್, ಆ್ಯಡಮ್ ಗಿಲ್‌ಕ್ರಿಸ್ಟ್, ಗ್ಲೆನ್ ಮೆಕ್‌ಗ್ರಾತ್, ಶೇನ್ ವಾರ್ನ್), ಇಂಗ್ಲೆಂಡ್‌ನ ಮೂವರು(ಜಾಕ್ ಹಾಬ್ಸ್, ಸ್ವಾನ್, ಜೇಮ್ಸ್ ಆ್ಯಂಡರ್ಸನ್), ವೆಸ್ಟ್‌ಇಂಡೀಸ್‌ನ ಮೂವರು(ಗೊರ್ಡನ್ ಗ್ರೀನಿಡ್ಜ್, ಗ್ಯಾರಿಫೀಲ್ಡ್ ಸೋಬರ್ಸ್, ಬ್ರಿಯಾನ್ ಲಾರಾ), ಭಾರತ(ಸಚಿನ್) ಹಾಗೂ ಪಾಕಿಸ್ತಾನದ(ವಸಿಂ ಅಕ್ರಂ) ತಲಾ ಒಬ್ಬರು ಆಟಗಾರರು ಆಯ್ಕೆಯಾಗಿದ್ದಾರೆ.

‘‘ನನ್ನ ತಲೆಮಾರಿನ ಶ್ರೇಷ್ಠ ಆಟಗಾರ ತೆಂಡುಲ್ಕರ್. ಲಾರಾ ಬದಲಿಗೆ ಸಚಿನ್‌ಗೆ ಬೌಲಿಂಗ್ ಮಾಡಲು ಆದ್ಯತೆ ನೀಡುವೆ ಎಂದು ಹೇಳಿರುವ ಸ್ವಾನ್, ಶೇನ್ ವಾರ್ನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಆಗಿದ್ದಾರೆ’’ ಎಂದು ತಿಳಿಸಿದರು.

ಸ್ವಾನ್ ಆಯ್ಕೆ ಮಾಡಿರುವ ಸಾರ್ವಕಾಲಿಕ ಶ್ರೇಷ್ಠ ತಂಡ: ಸರ್ ಜಾಕ್ ಹಾಬ್ಸ್, ಗೊರ್ಡನ್ ಗ್ರೀನಿಜ್, ಸರ್ ಡೊನಾಲ್ಡ್ ಬ್ರಾಡ್ಮನ್, ಬ್ರಿಯಾನ್ ಲಾರಾ, ಸಚಿನ್ ತೆಂಡುಲ್ಕರ್, ಸರ್ ಗ್ಯಾರಿಫೀಲ್ಡ್ ಸೋಬರ್ಸ್, ಆಡಮ್ ಗಿಲ್‌ಕ್ರಿಸ್ಟ್(ವಿಕೆಟ್‌ಕೀಪರ್), ಶೇನ್ ವಾರ್ನ್, ಗ್ರೇಮ್‌ಸ್ವಾನ್, ಗ್ಲೆನ್ ಮೆಕ್‌ಗ್ರಾತ್, ವಸಿಂ ಅಕ್ರಂ, ಜೇಮ್ಸ್ ಆ್ಯಂಡರ್ಸನ್(12ನೆ ಆಟಗಾರ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News