ನಿವೃತ್ತಿಯ ಸುಳಿವು ನೀಡಿದ ಫೆಡರರ್
Update: 2017-01-31 23:54 IST
ಮೆಲ್ಬೋರ್ನ್, ಜ.31: ಸ್ಪೇನ್‌ನ ರಫೆಲ್ ನಡಾಲ್‌ರನ್ನು ಮಣಿಸಿ 18ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಸ್ವಿಸ್‌ನ ಟೆನಿಸ್ ದಂತಕತೆ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯೇ ತನ್ನ ಕೊನೆಯ ಟೂರ್ನಿಯೂ ಆಗಬಹುದು ಎಂದು ಹೇಳುವ ಮೂಲಕ ನಿವೃತ್ತಿಯ ಸುಳಿವು ನೀಡಿದ್ದಾರೆ.
ರವಿವಾರ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನಡಾಲ್‌ರನ್ನು 5 ಸೆಟ್‌ಗಳ ಅಂತರದಿಂದ ಮಣಿಸಿರುವ ಫೆಡರರ್ ಐದು ವರ್ಷಗಳಿಂದ ಕಾಡುತ್ತಿದ್ದ ಪ್ರಶಸ್ತಿಯ ಬರ ನೀಗಿಸಿಕೊಂಡರು.
‘‘ಮುಂದಿನ ವರ್ಷ ನಿಮ್ಮನ್ನು ನೋಡುವ ವಿಶ್ವಾಸದಲ್ಲಿದ್ದೇನೆ. ನನ್ನಲ್ಲಿ ಮತ್ತಷ್ಟು ಟೆನಿಸ್ ಬಾಕಿಯಿದೆ ಎಂದು ನಿಮಗೆ ಗೊತ್ತಿದೆ. ಒಂದು ವೇಳೆ ಗಾಯದ ಮಸ್ಯೆ ಕಾಡಿದರೆ ಮುಂದಿನ ವರ್ಷ ಆಡಲು ಸಾಧ್ಯವಾಗದು. ಇಂತಹ ಅವಕಾಶ ಮತ್ತೊಮ್ಮೆ ಸಿಗುವ ವಿಶ್ವಾಸವಿಲ್ಲ’’ ಎಂದು ಫೆಡರರ್ ನುಡಿದರು.