×
Ad

ಭಾರತ ‘ಎ’ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕ

Update: 2017-01-31 23:56 IST

ಹೊಸದಿಲ್ಲಿ, ಜ.31: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯ ವಿರುದ್ದ ಫೆ.16 ರಿಂದ 18ರ ತನಕ ನಡೆಯಲಿರುವ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಪ್ರಿಯಾಂಕ್ ಪಾಂಚಾಲ್, ಜಿ.ರಾಹುಲ್ ಸಿಂಗ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಶಾನ್ ಕಿಶನ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಕಾರ್ಯನಿರ್ವಹಿಸಲಿದ್ದಾರೆ, ಕರ್ನಾಟಕದ ಆಫ್-ಸ್ಪಿನ್ನರ್ ಕೃಷ್ಣಪ್ಪ ಗೌತಮ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಭಾರತ ‘ಎ’ ತಂಡ: ಹಾರ್ದಿಕ್ ಪಾಂಡ್ಯ(ನಾಯಕ), ಅಖಿಲ್ ಹೆರ್ವಾಡ್ಕರ್, ಪ್ರಿಯಾಂಕ್ ಕೀರ್ತಿ, ಶ್ರೇಯಸ್ ಅಯ್ಯರ್, ಅಂಕಿತ್ ಭಾವ್ನೆ, ರಿಷಬ್ ಪಂತ್,ಇಶಾನ್ ಕಿಶನ್(ವಿಕೆಟ್‌ಕೀಪರ್), ಶಹಬಾಝ್ ನದೀಮ್, ಕೃಷ್ಣಪ್ಪ ಗೌತಮ್, ಕುಲ್‌ದೀಪ್ ಯಾದವ್, ನವದೀಪ್ ಸೈನಿ, ಅಶೋಕ್ ದಿಂಡ, ಮುಹಮ್ಮದ್ ಸಿರಾಜ್, ರಾಹುಲ್ ಸಿಂಗ್, ಬಾಬಾ ಇಂದ್ರಜಿತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News