ಆಸ್ಟ್ರೇಲಿಯಾ ವಿರುದ್ಧ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ
ಮುಂಬೈ,ಫೆ.01 : ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರು ವಾರ್ಮ್-ಅಪ್ ಪಂದ್ಯಗಳಲ್ಲಿ ಭಾರತ-ಎ ತಂಡದ ನೇತೃತ್ವ ವಹಿಸಲಿದ್ದಾರೆ. ಪಂದ್ಯಗಳು ಫೆಬ್ರವರಿ 16ರಿಂದ 18ರ ತನಕ ಆಸ್ಟ್ರೇಲಿಯಾದ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿವೆ.
ರಣಜಿ ಪಂದ್ಯಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಹಲವು ಕ್ರಿಕೆಟಿಗರು ಈ ತಂಡದಲ್ಲಿದ್ದು ಅವರಲ್ಲಿ ಗುಜರಾತಿನ ಟಾಪ್ ಸ್ಕೋರರ್ ಪ್ರಿಯಾಂಕ್ ಚಂಚಲ್ ಸರ್ವಿಸಸ್ ಬ್ಯಾಟ್ಸ್ ಮೆನ್ಜಿ ರಾಹುಲ್ ಸೇರಿದ್ದಾರೆ. ರಾಹುಲ್ ಅವರು ಪ್ಲೇಟ್ ಗ್ರೂಪ್ ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ್ದು ಸರಾಸರಿ 72ರಂತೆ 945 ರನ್ನುಗಳನ್ನು ಪೇರಿಸಿದ್ದಾರೆ.
ಇಶಾನ್ ಕಿಶನ್ ಅವರನ್ನುವಿಕೆಟ್ ಕೀಪರ್ ಆಗಿ ನೇಮಿಸಲಾಗಿದ್ದರೆ, ರಿಷಬ್ ಪಂತ್,ಹಾಗೂ ಬಾಬಾ ಇಂದರ್ ಜಿತ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ದಿಲ್ಲಿ ವಿರುದ್ಧದ ಪಂದ್ಯಗಳಲ್ಲಿ ಅಜೇಯ 351 ರನ್ನುಗಳನ್ನು ಬಾರಿಸಿದ ಹಾಗೂ ಒಟ್ಟು 687 ರನ್ ಗಳಿಸಿದ ಮಹಾರಾಷ್ಟ್ರದ ಅಂಕಿತ್ ಬವ್ನೆ ಕೂಡ ತಂಡದಲ್ಲಿದ್ದಾರೆ.
ದಿಲ್ಲಿಯ ವೇಗಿ ನವದೀಪ್ ಸೈನಿ, ಪೇಸ್ ಬೌಲರ್ ಮುಹಮ್ಮದ್ ಸಿರಾಜ್,ಮುಂಬೈ ಆರಂಭಿಕ ಬ್ಯಾಟ್ಸ್ ಮ್ಯಾನ್ ಅಖಿಲ್ ಹೆರ್ವಾಡ್ಕರ್ ಹಾಗೂ ಶ್ರೇಯಸ್ ಐಯ್ಯರ್, ಕರ್ನಾಟಕದ ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್, ಕುಲದೀಪ್ ಯಾದವ್ ಹಾಗೂ ರಣಜಿ ಟ್ರೋಫಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಶಾಹಬಾರ್ ನದೀಮ್ಅವರು ಕೂಡ ಭಾರತ ಎ ತಂಡದಲ್ಲಿದ್ದಾರೆ.
ತಂಡವನ್ನು ರಾಹುಲ್ ದ್ರಾವಿಡ್ ಕೋಚ್ ಆಗಿ ತರಬೇತುಗೊಳಿಸಲಿದ್ದಾರೆ.