ಅಂಧರ ಟ್ವೆಂಟಿ-20 ವಿಶ್ವಕಪ್: ಆಫ್ರಿಕ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಮುಂಬೈ, ಫೆ.3: ಅಂಧರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ದಕ್ಷಿಣ ಆಫ್ರಿಕದ ವಿರುದ್ಧ 9 ವಿಕೆಟ್‌ಗಳ ಅಂತರದ ಜಯ ಸಾಧಿಸಿದೆ.
ಇಲ್ಲಿನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ತಂಡ ಮೊದಲು ಬ್ಯಾಟಿಂಗ್ ಮಾಡಿತು. 20 ಓವರ್‌ಗಳಲ್ಲಿ 8 ವಿಕೆಟ್‌ಗೆ 157 ರನ್ ಗಳಿಸಿತು. ಡೇವಿಡ್ ಲಾಂಡ್ರಿ(ಅಜೇಯ 42) ಅಗ್ರ ಸ್ಕೋರರ್ ಎನಿಸಿಕೊಂಡರು. ಭಾರತದ ಬೌಲರ್ ಗಣೇಶ್(2-14) ಎರಡು ವಿಕೆಟ್ ಪಡೆದರು.
ಗೆಲ್ಲಲು ಕಠಿಣ ಸವಾಲು ಪಡೆದ ಭಾರತ ತಂಡ 13.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಆರಂಭಿಕ ಆಟಗಾರರಾದ ದುರ್ಗಾ ರಾವ್ ಹಾಗೂ ಇಕ್ಬಾಲ್ ಜಾಫರ್(ಅಜೇಯ 54, 39 ಎಸೆತ)ಮೊದಲ ವಿಕೆಟ್‌ಗೆ 43 ರನ್ ಜೊತೆಯಾಟ ನಡೆಸಿದರು. ರಾವ್ ಔಟಾದ ಬಳಿಕ ಒಂದಾದ ಜಾಫರ್ ಹಾಗೂ ಮುಹಮ್ಮದ್ ಫರ್ಹಾನ್(ಅಜೇಯ 59) 2ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 115 ರನ್ ಸೇರಿಸಿ ತಂಡ 14ನೆ ಓವರ್‌ನಲ್ಲಿ ಗೆಲುವು ಸಾಧಿಸಲು ನೆರವಾದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ: 20 ಓವರ್‌ಗಳಲ್ಲಿ 157/8
(ಡೇವಿಡ್ ಅಜೇಯ 42, ಗಣೇಶ್ 2-14)
ಭಾರತ: 13.5 ಓವರ್‌ಗಳಲ್ಲಿ 158/1
(ಇಕ್ಬಾಲ್ ಜಾಫರ್ ಅಜೇಯ 54, ಮುಹಮ್ಮದ್ ಫರ್ಹಾನ್ ಅಜೇಯ 59)