ಕೊಹ್ಲಿ ನಾಯಕತ್ವದ ಶೈಲಿ ಅತ್ಯಂತ ಪ್ರಭಾವಶಾಲಿ: ಲಾರಾ
ಹೈದರಾಬಾದ್, ಫೆ.5: ‘‘ವಿರಾಟ್ ಕೊಹ್ಲಿ ಸಮಕಾಲೀನ ಕ್ರಿಕೆಟ್‌ನ ಓರ್ವ ಶ್ರೇಷ್ಠ ಬ್ಯಾಟ್ಸ್‌ಮನ್. ಅವರಲ್ಲಿ ತನ್ನದೇ ಆದ ಬ್ಯಾಟಿಂಗ್ ಶೈಲಿಯಿದೆ. ನಾನು ಅವರನ್ನು ಬೇರೆ ಆಟಗಾರರೊಂದಿಗೆ ಹೋಲಿಕೆ ಮಾಡಲಾರೆ. ಕೊಹ್ಲಿ ತನ್ನ ನಾಯಕತ್ವದಲ್ಲಿಯೂ ತನ್ನದೇ ಶೈಲಿ ರೂಪಿಸಿಕೊಂಡಿದ್ದಾರೆ. ಅವರ ನಾಯಕತ್ವ ಅತ್ಯಂತ ಪರಿಣಾಮಕಾರಿಯಾಗಿದೆ’’ಎಂದು ವೆಸ್ಟ್‌ಇಂಡೀಸ್ ಬ್ಯಾಟಿಂಗ್ ದಂತಕತೆ ಬ್ರಿಯಾನ್ ಲಾರಾ ಅಭಿಪ್ರಾಯಪಟ್ಟಿದ್ದಾರೆ.
ವೆಸ್ಟ್‌ಇಂಡೀಸ್‌ನ ಮೂವರು ಸ್ಟಾರ್ ಆಟಗಾರರು ಭಾರತಕ್ಕೆ ಭೇಟಿ ನೀಡಿದ್ದು, ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮಂಗಳೂರಿಗೆ ಆಗಮಿಸಿದ್ದರೆ, ಕೋರ್ಟ್ನಿ ವಾಲ್ಶ್ ಹಾಗೂ ಬ್ರಿಯಾನ್ ಲಾರಾ ಹೈದರಾಬಾದ್‌ಗೆ ಆಗಮಿಸಿದ್ದಾರೆ. ಬಾಂಗ್ಲಾದೇಶದ ಬೌಲಿಂಗ್ ಕೋಚ್ ಆಗಿರುವ ವಾಲ್ಶ್ ಬಾಂಗ್ಲಾ ತಂಡದೊಂದಿಗೆ ಬಂದಿದ್ದಾರೆ. ಲಾರಾ ಹಾಗೂ ಗೇಲ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದಾರೆ.
131 ಟೆಸ್ಟ್ ಪಂದ್ಯಗಳಲ್ಲಿ 34 ಶತಕಗಳ ಸಹಿತ 11,953 ರನ್ ಗಳಿಸಿರುವ ಲಾರಾ ಹೈದರಾಬಾದ್‌ನ ಗಾಲ್ಫ್ ಅಸೋಸಿಯೇಶನ್‌ಗೆ ಭೇಟಿ ನೀಡಿ ಸಂಸ್ಥೆಯ ಗುಣಮಟ್ಟದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.