ಕುಪಿತ ಬ್ಯಾಟ್ಸ್‌ಮನ್ ಸ್ಟಂಪ್ ಎಸೆತಕ್ಕೆ ಫೀಲ್ಡರ್ ಬಲಿ !
ಢಾಕಾ, ಫೆ.6: ಔಟಾದ ಸಿಟ್ಟಿನಿಂದ ಬ್ಯಾಟ್ಸ್‌ಮನ್ ಒಬ್ಬರು ಸ್ಪಂಪ್‌ನ್ನು ಕಿತ್ತು ಎಸೆದ ಪರಿಣಾಮವಾಗಿ ಸ್ಟಂಪ್ ತಲೆಗೆ ಬಡಿದು ಹದಿನಾಲ್ಕರ ಹರೆಯದ ಫೀಲ್ಡರ್ ಒಬ್ಬರು ಮೃತಪಟ್ಟ ಘಟನೆ ಆಗ್ನೇಯ ಬಂದರು ನಗರ ಚಿತ್ತಗಾಂಗ್‌ನಲ್ಲಿ ನಡೆದಿದೆ.
ಫೈಸಲ್ ಹುಸೈನ್ ಸ್ಟಂಪ್ ಬಡಿದು ಮೃತಪಟ್ಟ ಬಾಲಕ. ಸೋಮವಾರ ಎರಡು ತಂಡಗಳ ನಡುವೆ ನಡೆಯುತ್ತಿದ್ದ ಸೌಹಾಧರ್ ಪಂದ್ಯದಲ್ಲಿ ಔಟಾದ ಸಿಟ್ಟಿನಿಂದ ಬ್ಯಾಟ್ಸ್‌ಮನ್ ಒಬ್ಬ ಸ್ಟಂಪ್‌ನ್ನು ಎತ್ತಿಕೊಂಡು ಮೇಲಕ್ಕೆ ಎಸೆದನು ಎನ್ನಲಾಗಿದೆ.ಆದರೆ ಸ್ಟಂಪ್ ಆಕಸ್ಮಿಕವಾಗಿ ಅಲ್ಲೇ ಕ್ಷೇತ್ರ ರಕ್ಷಣೆಯಲ್ಲಿದ್ದ ಫೀಲ್ಡರ್ ಫೈಸಲ್ ಹುಸೈನ್‌ನ ಕುತ್ತಿಗೆ ಮತ್ತು ತಲೆಗೆ ಬಡಿಯಿತು.
ಗಂಭೀರ ಗಾಯಗೊಂಡ ಬಾಲಕ ಫೈಸಲ್ ಹುಸೈನ್‌ನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಫೀಲ್ಡರ್ ಹುಸೈನ್ ಮೃತಪಟ್ಟಿರುವುದಾಗಿ ಸಹಾಯಕ ಪೊಲೀಸ್ ಆಯುಕ್ತರಾದ ಜಹಾಂಗೀರ್ ಅಹ್ಮದ್ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕ್ರಿಕೆಟ್ ಜಗಳ ಸಾಮಾನ್ಯ. ಹಳ್ಳಿಗಳಲ್ಲಿ ಕ್ರಿಕೆಟ್ ಜಗಳ ಜಾಸ್ತಿ.ಕಳೆದ ಮೇ ತಿಂಗಳಲ್ಲಿ ನೋ ವಿಚಾರದಲ್ಲಿ ಕಲಹ ಹುಟ್ಟಿಕೊಂಡು ಬ್ಯಾಟ್ಸ್‌ಮನ್ ಒಬ್ಬರು ಎದುರಾಳಿ ತಂಡದ ಹದಿನಾರರ ಹರೆಯದ ಬಾಲಕನನ್ನು ಸ್ಟಂಪ್‌ನಿಂದ ಬಡಿದು ಹತ್ಯೆ ಮಾಡಿದ್ದನು
,,,,,,,,,,,,,,,,,,