×
Ad

ಫಿಫಾ ರಾಯಭಾರಿಯಾಗಿ ಮರಡೋನಾ ಆಯ್ಕೆ

Update: 2017-02-10 22:59 IST

ಝೂರಿಕ್, ಫೆ.10: ಅರ್ಜೆಂಟೀನದ ಮಾಜಿ ನಾಯಕ ಡಿಯಾಗೊ ಮರಡೋನಾ ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾದ ರಾಯಭಾರಿ ಆಗಿ ನೇಮಕ ಮಾಡಲಾಗಿದೆ.

 ‘‘ಇದೀಗ ಪ್ರತಿಷ್ಠಿತ ಹುದ್ದೆ ಅಧಿಕೃತವಾಗಿ ಘೋಷಣೆಯಾಗಿದೆ. ಕೊನೆಗೂ ನನ್ನ ಜೀವಮಾನದ ಒಂದು ಕನಸು ನನಸಾಗಿದೆ. ಫುಟ್ಬಾಲ್‌ನ್ನು ನಿಜವಾಗಿ ಪ್ರೀತಿಸುವವರೊಂದಿಗೆ ಫಿಫಾದಲ್ಲಿ ಸ್ವಚ್ಛ ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಶ್ರಮಿಸುವೆ’’ ಎಂದು ಫೇಸ್‌ಬುಕ್ ಪೇಜ್‌ನಲ್ಲಿ 1986ರ ವಿಶ್ವಕಪ್ ವಿಜೇತ ನಾಯಕ ಮರಡೋನಾ ಹೇಳಿದ್ದಾರೆ.

ಮಾಜಿ ನಪೋಲಿ ಹಾಗೂ ಬಾರ್ಸಿಲೋನಾದ ಫಾರ್ವರ್ಡ್ ಆಟಗಾರ 56ರ ಪ್ರಾಯದ ಮರಡೋನಾ ಉಚ್ಚಾಟಿತಗೊಂಡಿರುವ ಫಿಫಾದ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಅವರನ್ನು ಕಟುವಾಗಿ ಟೀಕಿಸುತ್ತಾ ಬಂದಿದ್ದಾರೆ. ಬ್ಲಾಟರ್ ಪ್ರಸ್ತುತ ಫಿಫಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ 6 ವರ್ಷಗಳ ನಿಷೇಧ ಎದುರಿಸುತ್ತಿದ್ದಾರೆ.

ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿಯು ತನ್ನ ಇತಿಹಾಸದಲ್ಲಿ ಮೊದಲ ಬಾರಿ ನಡೆದಿರುವ ಭಾರೀ ಭ್ರಷ್ಟಾಚಾರ ಹಗರಣದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

91 ಪಂದ್ಯಗಳಲ್ಲಿ ಆಡಿರುವ ಮರಡೋನಾ ಬ್ಲಾಟರ್ ಉತ್ತರಾಧಿಕಾರಿ ಗಿಯಾನಿ ಇನ್‌ಫಾಂಟಿನೊ ಅವರಿಗೆ ನಿಕಟವರ್ತಿಯಾಗಿದ್ದ ಕಾರಣ ಕಳೆದ ವರ್ಷ ಫೆಬ್ರವರಿಯಲ್ಲಿ ಫಿಫಾ ರಾಯಭಾರಿ ಆಗಿ ಆಯ್ಕೆಯಾಗಿದ್ದು, ಇದೀಗ ಅವರ ಆಯ್ಕೆ ಅಧಿಕೃತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News