×
Ad

ಕೋಚ್‌ರಿಂದ ದೂರ ಸರಿದ ರಫೆಲ್ ನಡಾಲ್

Update: 2017-02-12 23:36 IST

ಸ್ಪೇನ್, ಫೆ.13: ಸ್ಪೇನ್‌ನ ಹಿರಿಯ ಟೆನಿಸ್ ತಾರೆ ರಫೆಲ್ ನಡಾಲ್ ಅವರು ತನ್ನ ಕೋಚ್ ಹಾಗೂ ಚಿಕ್ಕಪ್ಪನೂ ಆಗಿರುವ ಟೋನಿ ನಡಾಲ್‌ರಿಂದ ಬೇರ್ಪಟ್ಟಿದ್ದಾರೆ.

ತಾನು ಮುಂದಿನ ವರ್ಷದಿಂದ ನಡಾಲ್‌ರೊಂದಿಗೆ ಕೆಲಸ ಮಾಡಲಾರೆ. ತಾನು ನಮ್ಮ ಟೆನಿಸ್ ಅಕಾಡಮಿಯತ್ತ ಹೆಚ್ಚಿನ ಗಮನ ನೀಡುವೆ. ತನ್ನ ಹಾಗೂ ನಡಾಲ್ ನಡುವಿನ ಸಂಬಂಧ ಚೆನ್ನಾಗಿದೆ. ಇಷ್ಟು ವರ್ಷಗಳಿಂದ ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಉಂಟಾಗಿಲ್ಲ. ಈಗಲೂ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ತಾನು ಆತನಿಗೆ 17ನೆ ವರ್ಷವಾಗುವ ತನಕ ಎಲ್ಲ ನಿರ್ಧಾರ ನಾನೇ ತೆಗೆದುಕೊಳ್ಳುತ್ತಿದ್ದೆ. ಇದೀಗ ವರ್ಷದಿಂದ ವರ್ಷಕ್ಕೆ ಆತನ ಬಗ್ಗೆ ನಾನು ಯಾವ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ’’ ಎಂದು ಟೋನಿ ನಡಾಲ್ ಇಟಲಿಯ ವೆಬ್‌ಸೈಟ್‌ವೊಂದಕ್ಕೆ ತಿಳಿಸಿದ್ದಾರೆ.

 ‘‘ಟೋನಿ ನಡಾಲ್ ನಿರ್ಧಾರ ನಮಗೆ ಅಚ್ಚರಿ ಹಾಗೂ ಅನಿರೀಕ್ಷಿತವಾಗಿದೆ. ನಾನು ಈ ಕುರಿತು ನಡಾಲ್‌ರೊಂದಿಗೆ ಮಾತುಕತೆ ನಡೆಸುವೆ. ತಕ್ಷಣವೇ ಈ ವಿಷಯದ ಬಗ್ಗೆ ಚರ್ಚಿಸುವ ಬಗ್ಗೆ ಖಚಿತತೆಯಿಲ್ಲ’’ ಎಂದು ನಡಾಲ್‌ರ ವಕ್ತಾರರಾದ ಬೆನಿಟೊ ಪೆರೆಝ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News