×
Ad

ಬಿಸಿಸಿಐ ಜನರಲ್ ಮ್ಯಾನೇಜರ್ ಆರ್.ಪಿ. ಶಾ ರಾಜೀನಾಮೆ

Update: 2017-02-18 23:39 IST

ಹೊಸದಿಲ್ಲಿ, ಫೆ.18: ವಯಸ್ಸಿನ ಕಾರಣವನ್ನು ಮುಂದಿಟ್ಟುಕೊಂಡು ಬಿಸಿಸಿಐನ ಜನರಲ್ ಮ್ಯಾನೇಜರ್ ಆರ್.ಪಿ. ಶಾ ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಬಿಸಿಸಿಐನ ವಾಣಿಜ್ಯ ವಿಭಾಗದ ಜನರಲ್ ಮ್ಯಾನೇಜರ್ ಆಗಿದ್ದ ಶಾ ಮಂಡಳಿಯ ವಾಣಿಜ್ಯ ಹಿತಾಸಕ್ತಿಗೆ ಸಂಬಂಧಿಸಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದ್ದರು.

ಸುಪ್ರೀಂಕೋರ್ಟ್‌ನಿಂದ ನೇಮಕಗೊಂಡಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಬಿಸಿಸಿಐ ಕಾರ್ಯಚಟುವಟಿಕೆಯ ಪ್ರತಿ ಅಂಶವನ್ನು ನೋಡಿಕೊಳ್ಳುತ್ತಿರುವ ಕಾರಣ ಶಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದೊಂದು ವೈಯಕ್ತಿಕ ನಿರ್ಧಾರವಾಗಿದ್ದು, ನಾಲ್ಕು ತಿಂಗಳ ಹಿಂದೆಯೇ ಈ ನಿರ್ಧಾರಕ್ಕೆ ಬಂದಿರುವುದಾಗಿ ಶಾ ಸ್ಪಷ್ಟಪಡಿಸಿದ್ದಾರೆ.

‘‘ಹೌದು, ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಿರುವೆ. ನನಗೆ 61 ವರ್ಷ ಪ್ರಾಯವಾಗಿರುವ ಕಾರಣ ಈ ನಿರ್ಧಾರಕ್ಕೆ ಬಂದಿರುವೆ. ಅಕ್ಟೋಬರ್‌ನಲ್ಲಿ ನಾನು ಈ ನಿರ್ಧಾರ ಕೈಗೊಂಡಿದ್ದೆ. ನಾನು ಪುಣೆಯಲ್ಲಿ ನೆಲೆಸಿರುವ ಕಾರಣ ಮುಂಬೈಗೆ ಬಂದು-ಹೋಗುವುದು ಕಷ್ಟವಾಗುತ್ತಿತ್ತು. ಸಿಒಎಯಿಂದ ಯಾವುದೇ ಒತ್ತಡ ಇಲ್ಲವೇ ವಿಚಾರಣೆ ಎದುರಿಸಿಲ್ಲ. ನಾನು ಸಿಇಒ ರಾಹುಲ್ ಜೊಹ್ರಿ ಹಾಗೂ ಸಿಎಫ್‌ಒ ಸಂತೋಷ್‌ರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೆ ಎಂದು ಶಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News