×
Ad

ಮತ್ತೆ ನಾಯಕನಾದ ಧೋನಿ !

Update: 2017-02-21 22:36 IST

ಹೊಸದಿಲ್ಲಿ, ಫೆ.21: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಫ್ರಾಂಚೈಸಿಯಲ್ಲಿ ನಾಯಕತ್ವದಿಂದ ಕೆಳಗಿಳಿದಿರುವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಜಯ ಹಝಾರೆ ಟ್ರೋಫಿಯಲ್ಲಿ ರಾಜ್ಯ ತಂಡ ಜಾರ್ಖಂಡ್‌ನ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಧೋನಿ ಈ ಹಿಂದೆ ವಿಜಯ ಹಝಾರೆ ಟ್ರೋಫಿಯಲ್ಲಿ ಹಲವು ಆವೃತ್ತಿಗಳಲ್ಲಿ ಆಡಿದ್ದರು. ಆದರೆ ನಾಯಕತ್ವವನ್ನು ವಹಿಸಿಕೊಂಡಿರಲಿಲ್ಲ. ಜಾರ್ಖಂಡ್ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ದೇಶೀಯ ಕ್ರಿಕೆಟ್‌ನ ಅಗ್ರ ಸ್ಪಿನ್ನರ್ ಶಹಬಾಝ್ ನದೀಮ್ ಅವರಿದ್ದಾರೆ. ಐಪಿಎಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಇಶಾಂಕ್ ಜಗ್ಗಿ ಹಾಗೂ ವರುಣ್ ಆ್ಯರೊನ್, ಸೌರಭ್ ತಿವಾರಿ, ವಿರಾಟ್ ಸಿಂಗ್ ತಂಡದಲ್ಲಿದ್ದಾರೆ.

ಮತ್ತೊಂದೆಡೆ ಸ್ಪಿನ್ನರ್ ಹರ್ಭಜನ್ ಸಿಂಗ್ ಪಂಜಾಬ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದು, ಯುವರಾಜ್ ಸಿಂಗ್, ಮನ್‌ದೀಪ್ ಸಿಂಗ್ ಪಂಜಾಬ್ ತಂಡದಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ.


ಜಾರ್ಖಂಡ್ ತಂಡ: ಎಂಎಸ್ ಧೋನಿ(ನಾಯಕ) ಇಶಾನ್ ಕಿಶನ್, ಇಶಾಂಕ್ ಜಗ್ಗಿ, ವಿರಾಟ್ ಸಿಂಗ್, ಸೌರಭ್ ತಿವಾರಿ, ಕೌಶಲ್ ಸಿಂಗ್, ಪ್ರತ್ಯುಷ್ ಸಿಂಗ್, ಶಹಬಾಝ್ ನದೀಮ್, ಸೋನು ಕುಮಾರ್ ಸಿಂಗ್, ವರುಣ್ ಆ್ಯರೊನ್, ರಾಹುಲ್ ಶುಕ್ಲಾ, ಅಂಕುಲ್ ರಾಯ್, ಮೊನು ಕುಮಾರ್ ಸಿಂಗ್, ಜಸ್ಕಣ್ ಸಿಂಗ್, ಆನಂದ್ ಸಿಂಗ್, ಕುಮಾರ್, ರಾಥೋರ್, ವಿಕಾಶ್ ಸಿಂಗ್.

ಪಂಜಾಬ್ ತಂಡ: ಮನನ್ ವೋರಾ, ಶುಭಂ ಗಿಲ್, ಜೀವನ್‌ಜೋತ್ ಸಿಂಗ್,ಮನ್‌ದೀಪ್ ಸಿಂಗ್, ಯುವರಾಜ್ ಸಿಂಗ್, ಗುರುಕೀರತ್ ಸಿಂಗ್, ಗಿತ್ಮಾಶ್ ಖೇರ, ಅಭಿಷೇಕ್ ಶರ್ಮ, ಹರ್ಭಜನ್ ಸಿಂಗ್(ನಾಯಕ), ಮನ್‌ಪ್ರೀತ್ ಸಿಂಗ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮ, ವರುಣ್ ಖನ್ನಾ, ಬಲ್ಜೇತ್ ಸಿಂಗ್, ಮಾಯಾಂಕ್, ಶರದ್ ಲಂಬಾ ಹಾಗೂ ಶುಬೆಕ್ ಗಿಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News