ಸ್ಪಾಟ್ ಫಿಕ್ಸಿಂಗ್ ಆರೋಪ ನಿರಾಕರಿಸಿದ ಶಾರ್ಜೀಲ್, ಲತೀಫ್

Update: 2017-02-22 18:13 GMT

ಲಾಹೋರ್,ಫೆ.22: ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ(ಪಿಎಸ್‌ಎಲ್) ಸ್ಪಾಟ್-ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಆರೋಪವನ್ನು ಪಾಕಿಸ್ತಾನದ ಕ್ರಿಕೆಟ್ ತಂಡದ ಆಟಗಾರರಾದ ಶಾರ್ಜೀಲ್‌ಖಾನ್ ಹಾಗೂ ಖಾಲಿದ್ ಲತೀಫ್ ನಿರಾಕರಿಸಿದ್ದಾರೆ.

ಪಿಸಿಬಿ ನೀಡಿರುವ ನೋಟಿಸ್‌ಗೆ ಈ ಇಬ್ಬರು ಆಟಗಾರರು ನೀಡಿರುವ ಮೊದಲ ಪ್ರತಿಕ್ರಿಯೆಯಲ್ಲಿ ತಾವಿಬ್ಬರು ಮುಗ್ಧರು ಎಂದು ತಿಳಿಸಿದ್ದಾರೆ. ಪಿಸಿಬಿ ಭ್ರಷ್ಟಾಚಾರ ನೀತಿ ಸಂಹಿತೆ ಅಡಿ ಅಮಾನತುಗೊಂಡಿರುವ ಈ ಇಬ್ಬರ ಆಟಗಾರರ ವಿರುದ್ಧ ಕ್ರಿಕೆಟ್ ಮಂಡಳಿಯು ಇತ್ತೀಚೆಗೆ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಬುಕ್ಕಿಗಳನ್ನು ಸಂಪರ್ಕಿಸಿ,ಪಂದ್ಯಗಳನ್ನು ಫಿಕ್ಸ್ ಮಾಡಿರುವ ಆರೋಪದಲ್ಲಿ ಪಾಕ್‌ನ ಹಲವು ಆಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News