ನನ್ನನ್ನು ಕೊಹ್ಲಿಗೆ ಹೋಲಿಸಬೇಡಿ: ಉಮರ್ ಅಕ್ಮಲ್

Update: 2017-02-22 18:16 GMT

ಹೊಸದಿಲ್ಲಿ, ಫೆ.22: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ತನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ವಿಸ್ಡನ್ ಇಂಡಿಯಾಕ್ಕೆ ನೀಡಿರುವ ಸಂದರ್ಶನದಲ್ಲಿ ಪಾಕಿಸ್ತಾನದ ಹೊಡಿಬಡಿ ದಾಂಡಿಗ ಉಮರ್ ಅಕ್ಮಲ್ ಹೇಳಿದ್ದಾರೆ.

  ಕೊಹ್ಲಿ ಅವರನ್ನು ತನ್ನ ಬದಲಿಗೆ ಸಹ ಆಟಗಾರ, 3 ಹಾಗೂ 4ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸುತ್ತಿರುವ ಬಾಬರ್ ಆಝಂಗೆ ಹೋಲಿಸುವುದು ಸೂಕ್ತ. ಜನರು ತನ್ನನ್ನು ಕೊಹ್ಲಿಗೆ ಹೋಲಿಕೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಕೊಹ್ಲಿ ತನ್ನ ಮೊದಲ ಪಂದ್ಯದಿಂದ ಮೂರನೆ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ನಾನು ಆರನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಕೊಹ್ಲಿ ವಿಭಿನ್ನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನು ಮೂರನೆ ಕ್ರಮಾಂಕದಲ್ಲಿ ಆಡಿ, ಕೊಹ್ಲಿ 6ನೆ ಕ್ರಮಾಂಕದಲ್ಲಿ ಆಡುತ್ತಿದ್ದರೆ ಆಗ ನನ್ನನ್ನು ಅವರೊಂದಿಗೆ ಹೋಲಿಕೆ ಮಾಡುವುದು ಸೂಕ್ತವಾಗುತ್ತದ ಎಂದು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧ ಲಾಹೋರ್ ಕ್ವಾಲಾಂಡರ್ಸ್‌ ಪರ 42 ಎಸೆತಗಳಲ್ಲಿ 66 ರನ್ ಬಾರಿಸಿದ ಅಕ್ಮಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News