ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅನಾವರಣ

Update: 2017-02-22 18:23 GMT

 ದುಬೈ,ಫೆ.22: ಎಂಟನೆ ಆವೃತ್ತಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಬರೋಬ್ಬರಿ 100 ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಐಸಿಸಿ ಅಕಾಡಮಿಯಲ್ಲಿರುವ ಐಸಿಸಿ ಮುಖ್ಯಕಚೇರಿಯಲ್ಲಿ ಮಂಗಳವಾರ ಚಾಂಪಿಯನ್ಸ್ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು.

ಜಾಗತಿಕ ಪರ್ಯಟನೆ ನಡೆಸಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯು ಟೂರ್ನಿಯಲ್ಲಿ ಸ್ಪರ್ಧಿಸುವ 8 ದೇಶಗಳ 19 ನಗರಗಳಿಗೆ ಭೇಟಿ ನೀಡಲಿದೆ. ಈ ವೇಳೆ ಕ್ರಿಕೆಟ್ ಅಭಿಮಾನಿಗಳಿಗೆ ಪ್ರತಿಷ್ಠಿತ ಬೆಳ್ಳಿ ಲೇಪಿತ ಟ್ರೋಫಿಯನ್ನು ಹತ್ತಿರದಿಂದ ನೋಡುವ ಅವಕಾಶ ನೀಡಲಾಗುತ್ತದೆ.

  ಚಾಂಪಿಯನ್ಸ್ ಟ್ರೋಫಿಯ ವಿಶ್ವಪರ್ಯಟನೆ ಗುರುವಾರ ಆರಂಭವಾಗಲಿದ್ದು, ಮಾ.2 ರಂದು ಭಾರತಕ್ಕೆ ತೆರಳಲಿದೆ. ಆ ಬಳಿಕ ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ದಕ್ಷಿಣ ಆಫ್ರಿಕ, ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಕ್ಕೆ ತೆರಳಲಿದೆ. ಜೂ.1 ರಿಂ 18ರ ತನಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವಹಿಸಿರುವ ಇಂಗ್ಲೆಂಡ್‌ಗೆ ಮೇ 2 ರಂದು ಟ್ರೋಫಿ ತಲುಪಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News