ಅಪೂರ್ವ ಕ್ಯಾಚ್ ಪಡೆದ ಸಹಾ

Update: 2017-02-23 18:13 GMT

  ಪುಣೆ,ಫೆ.23: ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಮೇಲಕ್ಕೆ ಹಾರಿ ಒಂದೇ ಕೈಯಲ್ಲಿ ಕ್ಯಾಚ್ ಪಡೆಯುವ ಮೂಲಕ ಎಲ್ಲರನ್ನು ಮಂತ್ರಮುಗ್ದಗೊಳಿಸಿದರು.

ವೇಗದ ಬೌಲರ್ ಉಮೇಶ್ ಯಾದವ್ ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್‌ನ 82ನೆ ಓವರ್ ನಾಲ್ಕನೆ ಎಸೆತವನ್ನು 140 ಕಿ.ಮೀ. ವೇಗದಲ್ಲಿ ಎಸೆದರು. ಎದೆ ಎತ್ತರಕ್ಕೆ ಬಂದ ಈ ಚೆಂಡನ್ನು ಎದುರಿಸಿದ ಬಾಲಂಗೋಚಿ ಸ್ಟೀವ್ ಒ’ಕೀಫೆ ಕಟ್ ಮಾಡಲು ಯತ್ನಿಸಿದರು. ಆಗ ಚೆಂಡು ಬ್ಯಾಟ್‌ನ ತುದಿಗೆ ತಾಗಿ ಫಸ್ಟ್ ಸ್ಲಿಪ್‌ನತ್ತ ಚಿಮ್ಮಿದಾಗ ಕ್ಷಣಮಾತ್ರದಲ್ಲಿ ತನ್ನ ಬಲಬದಿಗೆ ಹಾರಿದ ವಿಕೆಟ್‌ಕೀಪರ್ ಸಹಾ ಒಂದೇ ಕೈಯಲ್ಲಿ ಕ್ಯಾಚ್‌ನ್ನು ಪಡೆದು ಒ’ಕೀಫೆಗೆ ಪೆವಿಲಿಯನ್ ಹಾದಿ ತೋರಿಸಿದರು.

ವೃತ್ತಿಜೀವನದಲ್ಲಿ ಮೊದಲ ಬಾರಿ ಇಂತಹ ಆಕರ್ಷಕ ಕ್ಯಾಚ್ ಪಡೆದ ಕೋಲ್ಕತಾದ ವಿಕೆಟ್‌ಕೀಪರ್ ಸಹಾಗೆ ನಾಯಕ ಕೊಹ್ಲಿ ಸಹಿತ ಸಹ ಆಟಗಾರರು ಅಪ್ಪಿಕೊಂಡು ಅಭಿನಂದಿಸಿದರು. ಸಹಾ ಪಡೆದ ಈ ಕ್ಯಾಚ್‌ಗೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಸುರಿಮಳೆಯಾಯಿತು.

ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿರುವ ಭಾರತದ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಕೀಪರ್ ಸಹಾ ಸಾಹಸವನ್ನು ಶ್ಲಾಘಿಸಿದ್ದಲ್ಲದೆ ಅವರನ್ನು ‘ಫ್ಲೈಯಿಂಗ್ ಸಹಾ’ ಎಂದು ಬಣ್ಣಿಸಿದರು.

ಭಾರತದ ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ ಹಾಗೂ ಮುಹಮ್ಮದ್ ಕೈಫ್ ಕೂಡ ಸಹಾರ ಅಪೂರ್ವ ಕ್ಯಾಚ್‌ನ್ನು ಕೊಂಡಾಡಿದರು.

‘‘ಇಂದು ವೃದ್ದಿಮಾನ್ ಸಹಾ ಬ್ಯಾಟ್ಸ್‌ಮನ್ ಮಾತ್ರವಲ್ಲ, ಇವರು ಸೂಪರ್ ಮ್ಯಾನ್... ಎಂದು ಭಾರತದ ಪರ 8 ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್‌ಕೀಪಿಂಗ್ ನಡೆಸಿದ್ದ ದೀಪ್‌ದಾಸ್ ಗುಪ್ತಾ ಟ್ವೀಟ್ ಮಾಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News