ಆಸ್ಟ್ರೇಲಿಯ 260ಕ್ಕೆ ಆಲೌಟ್‌

Update: 2017-02-24 04:23 GMT

ಪುಣೆ, ಫೆ.24: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ 94.5 ಓವರ‍್ ಗಳಲ್ಲಿ 260 ರನ್‌ಗಳಿಗೆ ಆಲೌಟಾಗಿದೆ. 
ಮೊದಲ ದಿನದಾಟದಂತ್ಯಕ್ಕೆ 94 ಓವರ್ ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 256 ರನ್‌ ಗಳಿಸಿದ್ದ ಆಸ್ಟ್ರೇಲಿಯ ಈ ಮೊತ್ತಕ್ಕೆ ಇಂದು 4 ರನ್‌ ಸೇರಿಸಿದೆ. ಇಂದು ದಾಳಿ ಆರಂಭಿಸಿದ ರವಿಚಂದ್ರನ್ ಅಶ್ವಿನ್‌ ಅವರ ಮೊದಲ ಓವರ‍್ ನ 5ನೆ ಎಸೆತದಲ್ಲಿ ಮಿಷೆಲ್‌ ಸ್ಟಾರ್ಕ್‌ (61) ಅವರು ರವೀಂದ್ರ ಜಡೇಜಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಮೊದಲ ದಿನ ಅವರು ಔಟಾಗದೆ 57 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News