ಓಕೀಫೆ ದಾಳಿಗೆ ತತ್ತರಿಸಿದ ಟೀಮ್‌ ಇಂಡಿಯಾ 105ಕ್ಕೆ ಆಲೌಟ್‌

Update: 2017-02-24 09:12 GMT

ಪುಣೆ, ಫೆ.24: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ಆಲ್‌ರೌಂಡರ‍್ ಸ್ಟೀಫನ್‌ ಓಕೀಫೆ (35ಕ್ಕೆ6) ದಾಳಿಗೆ ಸಿಲುಕಿದ ಟೀಮ್‌ ಇಂಡಿಯಾ ಮೊದಲ ಇನಿಂಗ್ಸ್‌ ನಲ್ಲಿ  40.1ಓವರ‍್ ಗಳಲ್ಲಿ 105 ರನ್‌ ಗಳಿಗೆ ಆಲೌಟಾಗಿದೆ.
32.2ನೆ ಓವರ್‌ನಲ್ಲಿ 64 ರನ್‌ ಗಳಿಸಿದ ಆರಂಭಿಕ ದಾಂಡಿಗ ಲೋಕೇಶ್‌ ರಾಹುಲ್‌ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು.  ಆಗ ತಂಡದ ಸ್ಕೋರ್ 94 ಆಗಿತ್ತು. ಬಳಿಕ  11 ರನ್‌ ಸೇರಿಸುವಷ್ಟರಲ್ಲಿ ಭಾರತ ಆಲೌಟಾಗಿದೆ.

44ಕ್ಕೆ ಭಾರತ 3 ವಿಕೆಟ್‌ ಕಳೆದುಕೊಂಡಿದ್ದಾಗ ಜೊತೆಯಾದ ರಾಹುಲ್ ಮತ್ತು ಅಜಿಂಕ್ಯ ರಹಾನೆ ನಾಲ್ಕನೆ ವಿಕೆಟ್‌ಗೆ 50 ರನ್‌ಗಳ ಜೊತೆಯಾದರು. 32.2ನೆ ಓವರ್‌ನಲ್ಲಿ ರಾಹುಲ್ ಮತ್ತು ರಹಾನೆ ಜೊತೆಯಾಟವನ್ನು ಓಕೀಫೆ ಮುರಿದರು.  ರಾಹುಲ್‌  ನಿರ್ಗಮಿಸಿದ ಬೆನ್ನಲ್ಲೆ ಭಾರತದ ಆಟಗಾರರ ಪೆವಿಲಿಯನ್‌ ಪರೇಡ್‌ ಆರಂಭಗೊಂಡಿತು. ರಹಾನೆ (13), ವೃದ್ಧಿಮಾನ್‌ ಸಹಾ (0) ಸೊನ್ನೆ ಸುತ್ತಿದರು. ರವಿಚಂದ್ರನ್‌ ಅಶ್ವಿನ್‌(1), ರವೀಂದ್ರ ಜಡೇಜ (2), ಜಯಂತ್‌ ಯಾದವ್‌ (2), ಉಮೇಶ್‌ ಯಾದವ್‌(4), ಬಂದ ದಾರಿಯಲ್ಲೇ ವಾಪಸಾದರು. ಇದರೊಂದಿಗೆ ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 155 ರನ್ ಗಳ ಮೇಲುಗೈ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News