ಮೊದಲ ಟೆಸ್ಟ್: ಆಸ್ಟ್ರೇಲಿಯ ಮೇಲುಗೈ

Update: 2017-02-24 11:56 GMT

ಪುಣೆ, ಫೆ.24: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತದ ವಿರುದ್ಧ  ಆಸ್ಟ್ರೇಲಿಯ ಮೇಲುಗೈ ಸಾಧಿಸಿದೆ.

ಟೆಸ್ಟ್ ನ ಎರಡನೆ ದಿನವಾಗಿರುವ  ಇಂದು ಆಸ್ಟ್ರೇಲಿಯ  ಎರಡನೆ ಇನಿಂಗ್ಸ್ ನಲ್ಲಿ ದಿನದಾಟದಂತ್ಯಕ್ಕೆ 46 ಓವರ್ ಗಳಲ್ಲಿ 4 ವಿಕೆಟ್  ನಷ್ಟದಲ್ಲಿ 143 ರನ್ ಗಳಿಸಿದೆ. ನಾಯಕ ಸ್ಟೀವನ್ ಸ್ಮಿತ್ ಔಟಾಗದೆ 59 ರನ್ ಮತ್ತು ಮಿಷೆಲ್ ಮಾರ್ಷ್ ಔಟಾಗದೆ 21 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ರವಿಚಂದ್ರನ್ ಅಶ್ವಿನ್ (68ಕ್ಕೆ 3) ದಾಳಿಗೆ ತತ್ತರಿಸಿ ಆಸ್ಟ್ರೇಲಿಯ  ಆರಂಭಿಕ ದಾಂಡಿಗರಾದ ಡೇವಿಡ್ ವಾರ್ನರ್ (10), ಶಾನ್ ಮಾರ್ಷ್ (0), ಹ್ಯಾಂಡ್ಸ್ ಕಂಬ್(19) ಅವರನ್ನು ಬೇಗನೆ ಕಳೆದುಕೊಂಡಿತ್ತು. ರೆನ್ ಶಾ(31) ಅವರು ಜಯಂತ್ ಯಾದವ್ ಎಸೆತದಲ್ಲಿ ಇಶಾಂತ್ ಶರ್ಮ ಅವರಿಗೆ ಕ್ಯಾಚ್ ನೀಡಿದರು.

ಇದಕ್ಕೂ ಮೊದಲು ಆಸ್ಟ್ರೇಲಿಯ ಭಾರತವನ್ನು ಮೊದಲ  ಇನಿಂಗ್ಸ್ ನಲ್ಲಿ 40.1 ಓವರ್ ಗಳಲ್ಲಿ 105 ರನ್ ಗಳಿಗೆ ನಿಯಂತ್ರಿಸಿತ್ತು. ಇದರೊಂದಿಗೆ 155 ರನ್ ಗಳ ಮುನ್ನಡೆ ಸಾಧಿಸಿತ್ತು. ಎರಡನೆ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿರುವ ಆಸ್ಟ್ರೇಲಿಯ ತಂಡ ಮೇಲುಗೈ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News