ಆಸ್ಟ್ರೇಲಿಯದ ಅನಿರೀಕ್ಷಿತ ಹೀರೋ ಸ್ಟೀಫನ್ ಒ’ಕೀಫೆ ಯಾರು?

Update: 2017-02-24 18:11 GMT

 ಪುಣೆ, ಫೆ.24: ಸ್ಟೀಫನ್ ಓ’ಕೀಫೆ ಆಸ್ಟ್ರೇಲಿಯದ ಅವಕಾಶ ವಂಚಿತ ಆಲ್‌ರೌಂಡರ್. 2014ರಲ್ಲಿ ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿರುವ ಓ’ಕೀಫೆ ಈತನಕ ಆಡಿರುವುದು ಕೇವಲ ನಾಲ್ಕು ಪಂದ್ಯ. ಟೆಸ್ಟ್ ಸರಣಿಯಲ್ಲಿ ಒಂದಕ್ಕಿಂತ ಹೆಚ್ಚು ಪಂದ್ಯದಲ್ಲಿ ಆಡುವ ಅವಕಾಶ ಇವರಿಗೆ ಲಭಿಸಿಲ್ಲ.

ದುಬೈ, ಸಿಡ್ನಿ, ಪಲ್ಲೆಕಲ್ ಹಾಗೂ ಸಿಡ್ನಿಯಲ್ಲಿ ತಲಾ ಒಂದು ಪಂದ್ಯಗಳನ್ನು ಆಡಿರುವ ಮಲೇಷ್ಯಾ ಸಂಜಾತ ಓ’ಕೀಫೆ ಶನಿವಾರ ಭಾರತದ ವಿರುದ್ಧ ಜೀವನಶ್ರೇಷ್ಠ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ.

ಎರಡನೆ ದಿನದಾಟವಾದ ಶನಿವಾರ ಭೋಜನ ವಿರಾಮದ ವೇಳೆ ಭಾರತದ ಮಾಜಿ ಆಲ್‌ರೌಂಡರ್ ಹಾಗೂ ಆಸ್ಟ್ರೇಲಿಯದ ಸ್ಪಿನ್ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಧರನ್ ಶ್ರೀರಾಮ್‌ರೊಂದಿಗೆ ಕೆಲವು ಸಮಯ ಕಳೆದಿರುವ ಓ’ಕೀಫೆ ಲಂಚ್ ವಿರಾಮದ ಬಳಿಕ ಮೊದಲ ಸ್ಪೆಲ್ ಎಸೆಯುವ ಅವಕಾಶ ಪಡೆದಿದ್ದರು. ತಾನೆಸೆದ ಮೊದಲ ಓವರ್‌ನಲ್ಲಿ 3 ವಿಕೆಟ್‌ಗಳನ್ನು ಉರುಳಿಸಿದ ಓ’ಕೀಫೆ ಪಂದ್ಯ ಆಸ್ಟ್ರೇಲಿಯದ ಪರ ವಾಲಲು ಕಾರಣರಾದರು. ಅತ್ಯುತ್ತಮ ಸ್ಪಿನ್ ದಾಳಿ ಮುಂದುವರಿಸಿದ ಓ’ಕೀಫೆ 13.1 ಓವರ್‌ಗಳಲ್ಲಿ 35ರನ್‌ಗೆ 6 ವಿಕೆಟ್‌ಗಳನ್ನು ಪಡೆದರು.

ಪ್ರವಾಸಿ ತಂಡದ ಬೌಲರ್‌ಗಳ ಪೈಕಿ ಶ್ರೇಷ್ಠ ಪ್ರದರ್ಶನ ನೀಡಿದ 3ನೆ ಬೌಲರ್ ಆಗಿದ್ದಾರೆ. 32ರ ಹರೆಯದ ಓ’ಕೀಫೆಗೆ ಭಾರತ ವಿರುದ್ಧದ ಈ ಸರಣಿ ಅತ್ಯಂತ ಮುಖ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News