ಕೊಹ್ಲಿ ಪಡೆಗೆ ಹೀನಾಯ ಸೋಲು

Update: 2017-02-25 18:29 GMT

ಪುಣೆ, ಫೆ.25: ಐಸಿಸಿ ನಂ.1ಟೆಸ್ಟ್ ತಂಡವಾಗಿರುವ ಭಾರತ ಇಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 333 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಐದು ದಿನಗಳ ಟೆಸ್ಟ್ ಪಂದ್ಯ ಮೂರೇ ದಿನಗಳಲ್ಲಿ ಮುಗಿದಿದೆ. ಆಸ್ಟ್ರೇಲಿಯವನ್ನು ಮಣಿಸಲು ಕೊಹ್ಲಿ ರೂಪಿಸಿದ್ದ ಎಲ್ಲ ತಂತ್ರಗಳು ಮೊದಲ ಟೆಸ್ಟ್‌ನಲ್ಲಿ ಫಲ ನೀಡಲಿಲ್ಲ..
ಆಸ್ಟ್ರೇಲಿಯ ತಂಡದ ಸ್ಪಿನ್ನರ್ ಓ’ಕೀಫೆ ಎರಡನೆ ಇನಿಂಗ್ಸ್‌ನಲ್ಲೂ ಭಾರತದ ದಾಂಡಿಗರನ್ನು ಕಾಡಿದರು. ಗೆಲುವಿಗೆ 441 ರನ್‌ಗಳ ಗೆಲುವಿನ ಸವಾಲು ಪಡೆದ ಭಾರತ 33.5 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟಾಗಿದೆ.
ಭಾರತದ ಯಾವನೇ ಒಬ್ಬ ದಾಂಡಿಗನಿಗೂ ಅರ್ಧಶತಕದ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಚೇತೇಶ್ವರ ಪೂಜಾರ 31 ರನ್ ಗಳಿಸಿರುವುದು ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ಓ’ಕೀಫೆ ಮೊದಲ ಇನಿಂಗ್ಸ್‌ನಲ್ಲಿ 35ಕ್ಕೆ 6 ವಿಕೆಟ್ ಹಾಗೂ ಎರಡನೆ ಇನಿಂಗ್ಸ್‌ನಲ್ಲೂ 35ಕ್ಕೆ 6 ವಿಕೆಟ್ ಉಡಾಯಿಸಿ ಭಾರತಕ್ಕೆ ಆಘಾತ ನೀಡಿದರು. ಓ’ಕೀಫೆಗೆ ಲಿಯೊನ್ ಸಾಥ್ ನೀಡಿ 53ಕ್ಕೆ 4 ವಿಕೆಟ್ ಪಡೆದರು. ಎರಡನೆ ಇನಿಂಗ್ಸ್‌ನಲ್ಲಿ ಪತನಗೊಂಡ 10 ವಿಕೆಟ್‌ಗಳನ್ನು ಓ’ಕೀಫೆ ಮತ್ತು ನಥಾನ್ ಲಿಯೊನ್ ಹಂಚಿಕೊಂಡರು.
 ಓ’ಕೀಫೆ ಟೆಸ್ಟ್‌ನಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದರು. ನಾಯಕ ಸ್ಮಿತ್ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ, ಎರಡನೆ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದರು. ಓ’ಕೀಫೆ ಮತ್ತು ಸ್ಮಿತ್ ಆಸ್ಟ್ರೇಲಿಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಓ’ಕೀಫೆ ಪಾಲಾಗಿದೆ.
ಆಸ್ಟ್ರೇಲಿಯ ಈ ಗೆಲುವಿನೊಂದಿಗೆ 4 ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಸೋಲಿನೊಂದಿಗೆ ಭಾರತದ ಗೆಲುವಿನ ಓಟ 19ರಲ್ಲಿ ಕೊನೆಗೊಂಡಿದೆ. 2004ರ ಬಳಿಕ ಆಸ್ಟ್ರೇಲಿಯ ಮೊದಲ ಬಾರಿ ಭಾರತದ ನೆಲದಲ್ಲಿ ಗೆಲುವು ದಾಖಲಿಸಿದೆ.
 ಕಠಿಣ ಸವಾಲು: ಭಾರತಕ್ಕೆ ಎರಡನೆ ಇನಿಂಗ್ಸ್ ನಲ್ಲಿ 441 ರನ್‌ಗಳ ಕಠಿಣ ಸವಾಲು ಎದುರಾಗಿತ್ತು. ಇನಿಂಗ್ಸ್ ಆರಂಭಿಸಿದ್ದ ಮುರಳಿ ವಿಜಯ್ ಮತ್ತು ಲೋಕೇಶ್ ರಾಹುಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
4.5 ಓವರ್‌ಗಳಲ್ಲಿ ಸ್ಕೋರ್ 10ಕ್ಕೆ ತಲುಪುವಾಗ ಮುರಳಿ ವಿಜಯ್ ಅವರನ್ನು ಓ’ಕೀಫೆ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ದಾಖಲಿಸಿದ್ದ ಲೊಕೇಶ್ ರಾಹುಲ್(10) ಅವರನ್ನು ಲಿಯೊನ್ ಎಲ್‌ಬಿಡಬ್ಲು ಬಲೆಗೆ ಬೀಳಿಸುವುದರೊಂದಿಗೆ ಭಾರತ ಕುಸಿತದ ಹಾದಿ ಹಿಡಿಯಿತು.
ನಾಯಕ ವಿರಾಟ್ ಕೊಹ್ಲಿ(13) ಅವರು ಓ’ಕೀಫೆ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರುವುದರೊಂದಿಗೆ ಭಾರತ ಸೋಲಿನ ದವಡೆಗೆ ಸಿಲುಕಿತು. 77ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ಬಳಿಕ ಈ ಮೊತ್ತಕ್ಕೆ 30 ರನ್ ಸೇರಿಸುವ ಹೊತ್ತಿಗೆ ಆಲೌಟಾಗಿದೆ.
ಚೇತೇಶ್ವರ ಪೂಜಾರಿ 58 ಎಸೆತಗಳನ್ನು ಎದುರಿಸಿ 2 ಬೌಂಡರಿಗಳ ಸಹಾಯದಿಂದ 31ರನ್ ಗಳಿಸಿದರು. ಇವರನ್ನು ಹೊರತುಪಡಿಸಿದರೆ ಬೇರೆ ಯಾರಿಂದಲೂ 30ಕ್ಕಿಂತ ಹೆಚ್ಚಿನ ಸ್ಕೋರ್ ದಾಖಲಾಗಲಿಲ್ಲ.
ಅಜಿಂಕ್ಯ ರಹಾನೆ 18 ರನ್, ಆರ್.ಅಶ್ವಿನ್ 8 ರನ್, ವೃದ್ಧಿಮಾನ್ ಸಹಾ 5ರನ್, ರವೀಂದ್ರ ಜಡೇಜ 3ರನ್, ಇಶಾಂತ್ ಶರ್ಮ 0, ಜಯಂತ್ ಯಾದವ್ 5 ರನ್ ಗಳಿಸಿ ಔಟಾಗುವುದರೊಂದಿಗೆ ಭಾರತ ಎರಡನೆ ಇನಿಂಗ್ಸ್‌ನ್ನು ಮುಗಿಸಿತು.
  ಸ್ಮಿತ್ ಶತಕ: 51ನೆ ಟೆಸ್ಟ್ ಆಡಿದ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ 18ನೆ ಶತಕ ದಾಖಲಿಸಿದರು. 187 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ ಸ್ಮಿತ್ ಶತಕ ಪೂರ್ಣಗೊಳಿಸಿದರು.
 
  ಎರಡನೆ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ 46 ಓವರ್‌ಗಳಲ್ಲಿ 4ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿತ್ತು. ನಾಯಕ ಸ್ಟೀವ್ ಸ್ಮಿತ್ 59 ರನ್ ಮತ್ತು ಮಿಷೆಲ್ ಮಾರ್ಷ್ ಔಟಾಗದೆ 21 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇಂದು ಆಟ ಮುಂದುವರಿಸಿದ ಸ್ಮಿತ್ ಅವರು ಮಾರ್ಷ್ ಜೊತೆ 5ನೆ ವಿಕೆಟ್‌ಗೆ 56 ರನ್ ಸೇರಿಸಿದರು. ಮಿಷೆಲ್ ಮಾರ್ಷ್ 31 ರನ್ ಗಳಿಸಿ ಔಟಾದರು. ಮ್ಯಾಥ್ಯೂ ವೇಡ್ 20 ರನ್ ಗಳಿಸಿ ಔಟಾಗಿದ್ದಾರೆ.
109 ರನ್ (2202ಎ, 11ಬೌ) ಗಳಿಸಿದ ಸ್ಮಿತ್ ಅವರನ್ನು ಜಡೇಜ ಎಲ್‌ಬಿಡಬ್ಲು ಬಲೆಗೆ ಕೆಡವಿದರು. ಸ್ಮಿತ್ ಔಟಾದ ಬಳಿಕ ಸ್ಟಾರ್ಕ್ 30ರನ್ , ಲಿಯೊನ್ 13 ರನ್ ಮತ್ತು ಓ’ಕೀಫೆ 6 ರನ್ ಗಳಿಸಿ ಔಟಾಗುವುದರೊಂದಿಗೆ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನ್ನು 87 ಓವರ್‌ಗಳಲ್ಲಿ 85 ರನ್‌ಗಳಿಗೆ ಮುಗಿಸಿತು.ಇದರೊಂದಿಗೆ ಆಸ್ಟ್ರೇಲಿಯ 440 ರನ್‌ಗಳ ಮುನ್ನಡೆ ಸಾಧಿಸಿತು.
ಭಾರತದ ಆರ್.ಅಶ್ವಿನ್ 119ಕ್ಕೆ 4, ರವೀಂದ್ರ ಜಡೇಜ 65ಕ್ಕೆ 3, ಉಮೇಶ್ ಯಾದವ್ 39ಕ್ಕೆ 2 ಮತ್ತು ಜಯಂತ್ ಯಾದವ್ 43ಕ್ಕೆ 1 ವಿಕೆಟ್ ಪಡೆದರು.
...........
ಸ್ಮಿತ್ ನಂ.1 ಟೆಸ್ಟ್ ಬ್ಯಾಟ್ಸ್‌ಮನ್ !
 ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್ ತಾನೋರ್ವ ನಂ.1 ಟೆಸ್ಟ್ ಬ್ಯಾಟ್ಸ್‌ಮನ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಸ್ಮಿತ್ ತಂಡದ ಸಹ ಆಟಗಾರರು ವೈಫಲ್ಯ ಅನುಭವಿಸಿದಾಗ ಅರ್ಧಶತಕ ಗಳಿಸಿ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಲು ಆಸ್ಟ್ರೇಲಿಯಕ್ಕೆ ನೆರವಾಗಿದ್ದರೂ, ಎರಡನೆ ಇನಿಂಗ್ಸ್‌ನಲ್ಲಿ ತಂಡದ ಸಹ ಆಟಗಾರರು ವೈಫಲ್ಯ ಅನುಭವಿಸಿದಾಗ ಭಾರತದ ದಾಳಿಯನ್ನು ಯಶಸ್ವಿಯಾಗಿ 18ನೆ ಶತಕ ದಾಖಲಿಸಿದರು.
ಸ್ಮಿತ್ ನಾಯಕರಾಗಿ 21 ಟೆಸ್ಟ್‌ಗಳಲ್ಲಿ 73.27 ಸರಾಸರಿ ಹೊಂದಿದ್ದಾರೆ. ವಿರಾಟ್ ಕೊಹ್ಲಿ 24 ಟೆಸ್ಟ್‌ಗಳಲ್ಲಿ 65.36 ಸರಾಸರಿ ಹೊಂದಿದ್ದಾರೆ. ಡಾನ್ ಬ್ರಾಡ್ಮನ್ 24 ಟೆಸ್ಟ್‌ಗಳಲ್ಲಿ 101.51 ಸರಾಸರಿ ಹೊಂದಿದ್ದರು. ಕುಮಾರ ಸಂಗಕ್ಕರ್ 15 ಟೆಸ್ಟ್‌ಗಳಲ್ಲಿ 69.60, ಮಹೇಲ ಜಯವರ್ಧನೆ 38 ಟೆಸ್ಟ್‌ಗಳಲ್ಲಿ ನಾಯಕರಾಗಿ 59.11 ಸರಾಸರಿ ಹೊಂದಿದ್ದರು.
........
ಸ್ಮಿತ್ ಭಾರತದ ವಿರುದ್ಧ ಸತತ 5 ಶತಕ
 ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಅವರಿಗೆ ಭಾರತದ ವಿರುದ್ಧದ ಟೆಸ್ಟ್‌ನಲ್ಲಿ ಆಡುವುದೆಂದರೆ ಹೆಚ್ಚು ಖುಶಿಯಂತೆ. ಅವರು ಭಾರತದ ವಿರುದ್ಧ ಆಡಿರುವ 7ಟೆಸ್ಟ್‌ಗಳಲ್ಲಿ 1,000 ರನ್ ಪೂರ್ಣಗೊಳಿಸಿದ್ದಾರೆ.
ಭಾರತದ ವಿರುದ್ಧ 1 ಸಾವಿರ ರನ್ ಪೂರ್ಣಗೊಳಿಸಿದ ಆಸ್ಟ್ರೇಲಿಯದ 11ನೆ ದಾಂಡಿಗ ಸ್ಮಿತ್. ಭಾರತದ ವಿರುದ್ಧ ಸ್ಮಿತ್ ಸತತ 5 ಟೆಸ್ಟ್‌ಗಳಲ್ಲಿ ಶತಕ ದಾಖಲಿಸಿರುವ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
 ಸ್ಮಿತ್ ಅವರು ಈ ವರೆಗೆ ಆಡಿರುವ 8 ದೇಶಗಳ ತಂಡಗಳ ವಿರುದ್ಧದ ಪಂದ್ಯಗಳ ಪೈಕಿ 7 ದೇಶಗಳ ವಿರುದ್ಧದ ಪಂದ್ಯಗಳಲ್ಲಿ ಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯ ತಂಡದ ಪರ ಪಾಕಿಸ್ತಾನ, ಇಂಗ್ಲೆಂಡ್, ಭಾರತ, ನ್ಯೂಝಿಲೆಂಡ್, ದಕ್ಷಿಣ ಆಫ್ರಿಕ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಶತಕ ದಾಖಲಿಸಿರುವ ಸ್ಮಿತ್ ಅವರು ಯುಎಇ ವಿರುದ್ಧ ಮಾತ್ರ ಮೂರಂಕೆಯ ಸ್ಕೋರ್ ದಾಖಲಿಸಲಿಲ್ಲ.

,,,,,,,,,,,,

ಸ್ಕೋರ್ ಪಟ್ಟಿ
    ಆಸ್ಟ್ರೇಲಿಯ ಮೊದಲ ಇನಿಂಗ್ಸ್ 94.5 ಓವರ್‌ಗಳಲ್ಲಿ ಆಲೌಟ್ 260
    ಭಾರತ ಮೊದಲ ಇನಿಂಗ್ಸ್ 40.1 ಓವರ್‌ಗಳಲ್ಲಿ ಆಲೌಟ್ 105
    ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 87 ಓವರ್‌ಗಳಲ್ಲಿ ಆಲೌಟ್ 285
            ವಾರ್ನರ್ ಎಲ್‌ಬಿಡಬ್ಲು ಬಿ ಅಶ್ವಿನ್10
            ಎಸ್.ಮಾರ್ಷ್ ಎಲ್‌ಬಿಡಬ್ಲು ಬಿ ಅಶ್ವಿನ್00
            ಎಸ್.ಸ್ಮಿತ್ ಎಲ್‌ಬಿಡಬ್ಲು ಬಿ ಜಡೇಜ 109
        ಹ್ಯಾಂಡ್ಸ್‌ಕಂಬ್ ಸಿ ವಿಜಯ್ ಬಿ ಅಶ್ವಿನ್19
        ರೆನ್‌ಶಾ ಸಿ ಶರ್ಮ ಬಿ ಜೆ.ಯಾದವ್31
        ಎಂ.ಮಾರ್ಷ್ ಸಿ ಸಹಾ ಬಿ ಜಡೇಜ31
        ವೇಡ್ ಸಿ ಸಹಾ ಬಿ ಉಮೇಶ್ ಯಾದವ್20
        ಸ್ಟಾರ್ಕ್ ಸಿ ರಾಹುಲ್ ಬಿ ಅಶ್ವಿನ್ 30
            ಓ’ಕೀಫೆ ಸಿ ಸಹಾ ಬಿ ಜಡೇಜ06
    ಲಿಯೊನ್ ಎಲ್‌ಬಿಡಬ್ಲು ಬಿ ಉಮೇಶ್ ಯಾದವ್13
            ಹೇಝಲ್‌ವುಡ್ ಔಟಾಗದೆ02
                    ಇತರೆ14
ವಿಕೆಟ್ ಪತನ: 1-10, 2-23, 3-61, 4-113, 5-169, 6-204, 7-246, 8-258, 9-279, 10-285
ಬೌಲಿಂಗ್ ವಿವರ
    ಆರ್.ಅಶ್ವಿನ್ 28-03-119-4
    ಆರ್.ಜಡೇಜ33-10-065-3
    ಯು.ಯಾದವ್ 13-01-039-2
    ಜೆ.ಯಾದವ್10-01-043-1
    ಐ.ಶರ್ಮ 03-00-006-0
    ಭಾರತ ಎರಡನೆ ಇನಿಂಗ್ಸ್ 33.5 ಓವರ್‌ಗಳಲ್ಲಿ ಆಲೌಟ್ 107
        ಎಂ.ವಿಜಯ್ ಎಲ್‌ಬಿಡಬ್ಲು ಬಿ ಓ ’ಕೀಫೆ 02
        ರಾಹುಲ್ ಎಲ್‌ಬಿಡಬ್ಲು ಬಿ ಲಿಯೊನ್ 10
             ಪೂಜಾರಎಲ್‌ಬಿಡಬ್ಲು ಬಿ ಓ ’ಕೀಫೆ 31
            ವಿ.ಕೊಹ್ಲಿ ಬಿ ಓ ’ಕೀಫೆ 13
         ಅಜಿಂಕ್ಯ ರಹಾನೆ ಸಿ ಲಿಯೊನ್ ಬಿ ಓಕೀಫೆ18
        ಆರ್.ಅಶ್ವಿನ್ ಎಲ್‌ಬಿಡಬ್ಲು ಬಿ ಓ ’ಕೀಫೆ 08
    ವೃದ್ಧಿಮಾನ್ ಸಹಾ ಎಲ್‌ಬಿಡಬ್ಲು ಬಿ ಓ ’ಕೀಫೆ 05
                ಜಡೇಜ ಬಿ ಲಿಯೊನ್‌ 03
        ಜಯಂತ್ ಯಾದವ್ ಸಿ ವೇಡ್ ಬಿ ಲಿಯೊನ್‌05
        ಇಶಾಂತ್ ಶರ್ಮ ಸಿ ವಾರ್ನರ್ ಬಿ ಲಿಯೊನ್‌ 00
            ಉಮೇಶ್ ಯಾದವ್ ಔಟಾಗದೆ00
                    ಇತರೆ12
ವಿಕೆಟ್ ಪತನ: 1-10, 2-16,3-47, 4-77, 5-89, 6-99, 7-100, 8-102, 9-102, 10-107
ಬೌಲಿಂಗ್ ವಿವರ
        ಸ್ಟಾರ್ಕ್ 02.0-2-00-0
    ಲಿಯೊನ್ 14.5-2-53-4
        ಓ’ಕೀಫೆ15.0-4-35-6
    ಹೇಝಲ್‌ವುಡ್02.0-0-07-0
ಪಂದ್ಯಶ್ರೇಷ್ಠ: ಸ್ಟೀಫನ್ ಓ’ಕೀಫೆ.
,,,,,,,,,,,,
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News