×
Ad

ಕಳಿಂಗ ತಂಡಕ್ಕೆ ಎಚ್‌ಐಎಲ್ ಟ್ರೋಫಿ

Update: 2017-02-26 23:31 IST

ಚಂಡಿಗಡ, ಫೆ.26: ದಬಾಂಗ್ ಮುಂಬೈ ತಂಡವನ್ನು ಮಣಿಸಿರುವ ಕಳಿಂಗ ಲ್ಯಾನ್ಸರ್ ತಂಡ ಹಾಕಿ ಇಂಡಿಯಾ ಲೀಗ್(ಎಚ್‌ಐಎಲ್) ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ರವಿವಾರ ಇಲ್ಲಿ ನಡೆದ ಅತ್ಯಂತ ರೋಚಕ ಫೈನಲ್ ಪಂದ್ಯದಲ್ಲಿ ಕಳಿಂಗ ತಂಡ ಮುಂಬೈ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸಿತು. ಕಳಿಂಗ ಪರ ಮೊರಿಟ್ಝ್ ಫುರ್ಸ್ಟ್(30ನೆ, 58ನೆ ನಿಮಿಷ) ಎರಡು ಬಾರಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದರು. 18ನೆ ನಿಮಿಷದಲ್ಲಿ ಟೂರ್ನಿಯ ಗರಿಷ್ಠ ಸ್ಕೋರರ್ ಗ್ಲೆನ್ ಟರ್ನರ್ ಕಳಿಂಗಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟಿದ್ದರು.

ಮುಂಬೈನ ಪರ ಅಫ್ಫಾನ್ ಯೂಸುಫ್(33ನೆ ನಿ.)ಏಕೈಕ ಗೋಲು ಬಾರಿಸಿದರು. ಕಳೆದ ವರ್ಷ ಜೇಪಿ ಪಂಜಾಬ್ ವಾರಿಯರ್ಸ್‌ಗೆ ಶರಣಾಗಿ ರನ್ನರ್ಸ್‌-ಅಪ್‌ಗೆ ತೃಪ್ತಿಪಟ್ಟಿದ್ದ ಕಳಿಂಗ ತಂಡ ಈ ಬಾರಿ ಪ್ರಶಸ್ತಿ ಜಯಿಸಲು ಸಫಲವಾಯಿತು.

ಇದಕ್ಕೆ ಮೊದಲು 3ನೆ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಿಝಾರ್ಡ್ಸ್ ತಂಡ ಡೆಲ್ಲಿ ವೇವ್‌ರೈಡರ್ಸ್ ತಂಡವನ್ನು 5-4 ರಿಂದ ಮಣಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News