ಶೂಟಿಂಗ್ ವಿಶ್ವಕಪ್‌ನಲ್ಲಿ ಜೀತು ರಾಯ್‌ಗೆ ಕಂಚು : ಭಾರತಕ್ಕೆ ನಾಲ್ಕನೆ ಸ್ಥಾನ
ಹೊಸದಿಲ್ಲಿ, ಫೆ.28: ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಖ್ಯಾತ ಪಿಸ್ತೂಲ್ ಶೂಟರ್ ಜಿತು ರಾಯ್ ಅವರು 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದಾರೆ.
ಭಾರತ ಶೂಟಿಂಗ್ ವಿಶ್ವಕಪ್‌ನಲ್ಲಿ ನಾಲ್ಕನೆ ಸ್ಥಾನ ಪಡೆದಿದೆ.
29ರ ಹರೆಯದ ಆರ್ಮಿ ಮ್ಯಾನ್ ಜಿತು ರಾಯ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 216.7 ಅಂಕಗಳನ್ನು ಪಡೆದು ಕಂಚನ್ನು ತನ್ನದಾಗಿಸಿಕೊಂಡರು. ಒಟ್ಟು 8 ಮಂದಿ ಸ್ಪರ್ಧಾಳುಗಳು ಅಂತಿಮ ಸುತ್ತಿಗೆ ತೇರ್ಗಡೆಯಾಗಿದ್ದರು.
240.1 ಅಂಕಗಳನ್ನು ಗಳಿಸಿದ ಜಪಾನ್‌ನ ಟೊಮೋಯುಕಿ ಮಟ್ಸುಡಾ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿದ್ದಾರೆ.ವಿಯೆಟ್ನಾಂನ ಕ್ಸುವಾನ್ ವಿನ್ ಹಾಂಗ್ 236.6 ಅಂಕಗಳೊಂದಿಗೆ ಬೆಳ್ಳಿಯ ನಗೆ ಬೀರಿದ್ದಾರೆ.
ಡಾ.ಕರಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಚೀನಾದ ಝಾನಿಯಿ ಕ್ಸು (197.9) ಅವರನ್ನು ಹಿಂದಕ್ಕೆ ತಳ್ಳಿ ಜಿತು ರಾಯ್ ಕಂಚು ಪಡೆದಿದ್ದಾರೆ.
ಪ್ರಥಮ ಸ್ಪರ್ಧೆಯಲ್ಲಿ ಜೀತು ರಾಯ್ 8.8 , ಎರಡನೆ ರ್ಸ್ಫೆಯಲ್ಲಿ 10.6 ಕೊನೆಯಲ್ಲಿ ಜೀತು 98.7 ಅಂಕಗಳೊಂದಿಗೆ ಅಂತಿಮ ಸುತ್ತಿಗೆ ತೇರ್ಗಡೆಯಾಗಿದ್ದರು.
ಭಾರತದ ಇತರ ಇಬ್ಬರು ಶೂಟರ್‌ಗಳಾದ ಓಂಕಾರ್ ಸಿಂಗ್ ಮತ್ತು ಅಮನ್‌ಪ್ರೀತ್ ಸಿಂಗ್ ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾಗುವಲ್ಲಿ ಎಡವಿದ್ದರು.