ಕೊಹ್ಲಿಗೆ ಪಾಲಿ ಉಮ್ರಿಗರ್, ಅಶ್ವಿನ್‌ಗೆ ದಿಲಿಪ್ ಸರ್‌ದೇಸಾಯಿ ಪ್ರಶಸ್ತಿ
ಬೆಂಗಳೂರು, ಮಾ.1: ಭಾರತದ ನಾಯಕ ವಿರಾಟ್ ಕೊಹ್ಲಿ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿ ಹಾಗೂ ಆಲ್‌ರೌಂಡರ್ ಆರ್.ಅಶ್ವಿನ್ ದಿಲಿಪ್ ಸರ್‌ದೇಸಾಯಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾ.8 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಇಬ್ಬರು ಆಟಗಾರರಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಬಿಸಿಸಿಐ ಪ್ರಕಟನೆಯೊಂದರಲ್ಲಿ ತಿಳಿಸಿದೆ.
‘ಐಸಿಸಿ ವರ್ಷದ ಕ್ರಿಕೆಟಿಗ’ ಕೊಹ್ಲಿ ಮೂರನೆ ಬಾರಿ ಪಾಲಿ ಉಮ್ರಿಗರ್ ಪ್ರಶಸ್ತಿ ಸ್ವೀಕರಿಸುತ್ತಿರುವ ಭಾರತದ ಮೊದಲ ಕ್ರಿಕೆಟಿಗನಾಗಿದ್ದಾರೆ. ಕೊಹ್ಲಿ 2011-12 ಹಾಗೂ 2014-15ರಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
2011ರಲ್ಲಿ ದಿಲಿಪ್ ಸರ್‌ದೇಸಾಯಿ ಪ್ರಶಸ್ತಿಯನ್ನ್ನು ಮೊದಲ ಬಾರಿ ಗೆದ್ದುಕೊಂಡಿರುವ ಅಶ್ವಿನ್ ಇದೀಗ ಎರಡನೆ ಬಾರಿ ಈ ಪ್ರಶಸ್ತಿಗೆ ಭಾಜನರಾಗಿರುವ ಭಾರತದ ಮೊದಲ ಕ್ರಿಕೆಟಿಗನಾಗಿದ್ದಾರೆ.
ರಣಜಿ ಟ್ರೋಫಿ, ಸಿ.ಕೆ. ನಾಯ್ಡು ಟ್ರೋಫಿ, ಮಹಿಳೆಯರ ಪ್ಲೇಟ್ ಲೀಗ್ ಗ್ರೂಪ್‌ನ್ನು ಜಯಿಸಿದ್ದ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) 2015-16ನೆ ಋತುವಿನ ಶ್ರೇಷ್ಠ ರಾಜ್ಯ ಕ್ರಿಕೆಟ್ ಸಂಸ್ಥೆಯಾಗಿ ಆಯ್ಕೆಯಾಗಿದೆ.