×
Ad

ಹಳೆ ಸ್ನೇಹಿತನನ್ನು ಭೇಟಿಯಾದ ಧೋನಿ

Update: 2017-03-02 23:52 IST

 ಕೋಲ್ಕತಾ,ಮಾ.2: ಭಾರತದ ಮಾಜಿ ನಾಯಕ ಎಂಎಸ್ ಧೋನಿ ಕ್ರಿಕೆಟ್‌ನಲ್ಲಿ ಜನಪ್ರಿಯತೆ ಗಳಿಸುವ ಮೊದಲು ಖಾರಗ್‌ಪುರ ರೈಲ್ವೆ ಸ್ಟೇಶನ್‌ನಲ್ಲಿ ಜೂನಿಯರ್ ಟ್ರೈನ್ ಟಿಕೆಟ್ ಇನ್ಸ್‌ಪೆಕ್ಟರ್ ಆಗಿದ್ದರು. ಯಾವಾಗಲೂ ಚಹಾ ಸ್ಟಾಲ್‌ಗೆ ತೆರಳುತ್ತಿದ್ದ ಅವರು ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಇದೀಗ ಚಹಾ ಅಂಗಡಿಯ ತನ್ನ ಅಚ್ಚುಮೆಚ್ಚಿನ ಗೆಳೆಯ ಥಾಮಸ್‌ರನ್ನು ಭೇಟಿಯಾಗಿದ್ದಾರೆ.

 ಈಗ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡುತ್ತಿರುವ ಧೋನಿ ಕೋಲ್ಕತಾಕ್ಕೆ ಭೇಟಿ ನೀಡಿದ್ದು, ಈ ವೇಳೆ ಥಾಮಸ್‌ರನ್ನು ಭೇಟಿಯಾದರು.

ಈಡನ್‌ಗಾರ್ಡನ್ ಸ್ಟೇಡಿಯಂನ ಹೊರಗೆ ಕಾಯುತ್ತಿದ್ದ ಥಾಮಸ್‌ರನ್ನು ತಕ್ಷಣವೇ ಗುರುತು ಹಿಡಿದ ಧೋನಿ ಅವರನ್ನು ಅಪ್ಪಿಕೊಂಡರು. ಸಂಜೆಯ ಡಿನ್ನರ್‌ಗೆ ಬರುವಂತೆ ಥಾಮಸ್‌ಗೆ ಆಹ್ವಾನ ನೀಡಿದರು.

 ಧೋನಿ ಖಾರಗ್‌ಪುರದಲ್ಲಿದ್ದಾಗ ನನ್ನ ಚಹಾ ಅಂಗಡಿಗೆ ದಿನಕ್ಕೆ ಎರಡರಿಂದ ಮೂರು ಬಾರಿ ಆಗಮಿಸುತ್ತಿದ್ದರು. ಹೆಚ್ಚಿನ ಬಾರಿ ಅವರಿಗೆ ಬಿಸಿಬಿಸಿ ಹಾಲನ್ನು ನೀಡುತ್ತಿದ್ದೆ. ಇದೀಗ ಧೋನಿಯನ್ನು ಭೇಟಿಯಾಗಿರುವ ತಾನು ಖಾರಗ್‌ಪುರಕ್ಕೆ ವಾಪಸಾದ ಬಳಿಕ ನನ್ನ ಚಹಾ ಅಂಗಡಿಗೆ ಱಧೋನಿ ಟೀ ಸ್ಟಾಲ್‌ೞಎಂದು ಹೆಸರಿಡುವೆ ಎಂದು ಭಾವೋದ್ವೇಗದಿಂದ ಥಾಮಸ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News