×
Ad

ರವಿವಾರ ಪಿಎಸ್‌ಎಲ್ ಫೈನಲ್‌: ಲಾಹೋರ್ ಸ್ಟೇಡಿಯಂ ಸಜ್ಜು

Update: 2017-03-04 23:14 IST

ಲಾಹೋರ್, ಮಾ.4: ಪಾಕಿಸ್ತಾನದ ಎರಡನೆ ದೊಡ್ಡ ನಗರ ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಫೈನಲ್ ಪಂದ್ಯ ರವಿವಾರ ನಿಗದಿಯಾಗಿದ್ದು ಫೈನಲ್‌ನಲ್ಲಿ ಪೇಶಾವರ ಝಲ್ಮಿ ಹಾಗೂ ಕ್ವೆಟ್ಟಾ ಗ್ಲಾಡಿಯೇಟರ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಈಗಾಗಲೇ 18,000 ಟಿಕೆಟ್‌ಗಳು ಮಾರಾಟವಾಗಿದ್ದು, ಪಂದ್ಯ ಹೌಸ್‌ಫುಲ್ ಆಗುವ ನಿರೀಕ್ಷೆಯಿದೆ. ವಿದೇಶದ ಪ್ರಮುಖ ಆಟಗಾರರನ್ನು ಪಾಕಿಸ್ತಾನಕ್ಕೆ ಕರೆತರುವ ಪ್ರಯತ್ನವಾಗಿ ಪಿಸಿಬಿ ಪಾಕಿಸ್ತಾನದಲ್ಲೇ ಪಿಎಸ್‌ಎಲ್ ಫೈನಲ್‌ನ್ನು ಆಯೋಜಿಸಿತ್ತು.

ಪಾಕಿಸ್ತಾನದೆಲ್ಲೆಡೆ ಬಾಂಬು ಸ್ಫೋಟ ಪ್ರಕರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ರವಿವಾರ ನಡೆಯಲಿರುವ ಪಂದ್ಯಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪಂಜಾಬ್ ಪೊಲೀಸ್ ಹಾಗೂ ಪಾಕ್ ಅರೆಸೇನಾ ಪಡೆ ಸೇರಿದಂತೆ 10,000ಕ್ಕೂ ಅಧಿಕ ಭದ್ರತಾಸಿಬ್ಬಂದಿ ನಿಯೋಜಿಸಲಾಗಿದೆ. ಮೂರು ಸುತ್ತಿನ ತಪಾಸಣೆಯ ಬಳಿಕವೇ ಪ್ರೇಕ್ಷಕರು ಲಾಹೋರ್ ಸ್ಟೇಡಿಯಂನೊಳಗೆ ಪ್ರವೇಶಿಸಬಹುದು. ಲಾಹೋರ್ ಸ್ಟೇಡಿಯನ ಸುತ್ತಮುತ್ತ 3 ದಿನಗಳಿಂದ ವಾಹನ ಪ್ರವೇಶ ನಿರಾಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News