ದೇಶದ್ರೋಹ ಪ್ರಕರಣ : ಶಿಕ್ಷೆಯಾದ ಮಹಿಳೆಯ ಬಿಡುಗಡೆಗೆ ಪುಟಿನ್‌ ಆದೇಶ

Update: 2017-03-08 05:52 GMT

ಮಾಸ್ಕೊ,ಮಾ.8: ರಷ್ಯದಲ್ಲಿ ದೇಶದ್ರೋಹ ಪ್ರಕರಣದಲ್ಲಿ ಏಳುವರ್ಷ ಶಿಕ್ಷೆಗೆಗುರಿಯಾದ ಮಹಿಳೆಯನ್ನು ಬಿಡುಗಡೆಗೊಳಿಸಲು ರಷ್ಯದ ಅಧ್ಯಕ್ಷ ವಾಲ್ದಿಮಿರ್ ಪುಟಿನ್ ಅದೇಶಿಸಿದ್ದಾರೆ.

ಅಂಗಡಿಯೊಂದರ ಮಾಲಕಿ ಒಸಾನಾ ಸೆವಾಸ್ತಿತಿ(46)ಯನ್ನು ಬಿಡುಗಡೆಗೊಳಿಸಲು ಪುಟಿನ್ ನಿರ್ಧರಿಸಿದ್ದಾರೆ.2016ರಲ್ಲಿ ದೇಶದ್ರೋಹ ಆರೋಪದಲ್ಲಿ ಮಹಿಳೆಗೆ ಶಿಕ್ಷೆ ವಿಧಿಸಲಾಗಿತ್ತು.   ನೆರೆಯ ದೇಶ ಜಾರ್ಜಿಯಕ್ಕೆ ಸೈನಿಕ ಸಾಮಗ್ರಿಗಳನ್ನು ಕೊಂಡೊಯ್ಯುವ ರೈಲಿನ ಬಗ್ಗೆ ಎಂಟು ವರ್ಷಗಳ ಹಿಂದೆ ಪರಿಚಿತ ವ್ಯಕ್ತಿಗೆ ಎಸ್ಸೆಮ್ಮೆಸ್ ಸಂದೇಶ ಕಳುಹಿಸಿದ್ದಕ್ಕಾಗಿ ಒಸಾನಾ ವಿರುದ್ಧ ದೇಶದ್ರೋಹ ಆರೋಪವನ್ನು ಹೊರಿಸಲಾಗಿತ್ತು.

ಇವರು 2008 ಎಪ್ರಿಲ್‌ನಲ್ಲಿ ಸೇನಾ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ರೈಲಿನ ಫೋಟೊವನ್ನು ಜಾರ್ಜಿಯದ ಪರಿಚಿತನಿಗೆ ಎಸ್ಸೆಮ್ಮೆಸ್ ಮೂಲಕ ಕಳುಹಿಸಿದ್ದರು. ಜಾರ್ಜಿಯದೊಂದಿಗೆ ರಷ್ಯ ಯುದ್ಧ ಆರಂಭಿಸುವುದಕ್ಕಿಂತ ಒಂದು ತಿಂಗಳು ಮೊದಲು ಪರಿಚಿತನಿಗೆ ಒಸಾನ ಸಂದೇಶವನ್ನು ಕಳುಹಿಸಿದ್ದರು.

ಒಸಾನರಿಗೆ ಕೋರ್ಟು ಶಿಕ್ಷೆ ನೀಡಿದ್ದರ ವಿರುದ್ಧ ಮಾನವಹಕ್ಕು ಸಂಘಟನೆಗಳು ವಿರೋಧಿಸಿ ರಂಗಪ್ರವೇಶಿಸಿದ್ದವು ಎಂದುವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News