ಮೆಸ್ಸಿ ಓರ್ವ ಮೂರ್ಖ ಎಂದು ಕರೆದು ಕ್ಷಮೆಯಾಚಿಸಿದ ಈಜಿಪ್ಟ್‌ನ ಪುರಾತತ್ವ ಶಾಸ್ತ್ರಜ್ಞ

Update: 2017-03-08 18:36 GMT

ಕೈರೊ, ಮಾ.8: ಈಜಿಪ್ಟ್‌ನ ಖ್ಯಾತ ಪುರಾತತ್ವ ಶಾಸ್ತ್ರಜ್ಞರೊಬ್ಬರು ಕೋಪದ ಬರದಲ್ಲಿ ಅರ್ಜೆಂಟೀನದ ಫುಟ್ಬಾಲ್ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರನ್ನು ಓರ್ವ ಮೂರ್ಖ ಎಂದು ಕರೆದು ಬಳಿಕ ಕ್ಷಮೆಯಾಚಿಸಿದ್ದಾರೆ.

ಅರ್ಜೆಂಟೀನದ ಸ್ಟ್ರೈಕರ್ ಮೆಸ್ಸಿ ಗಿಝಾ ಪಿರಾಮಿಡ್ ವೀಕ್ಷಿಸಿದ ಬಳಿಕ ಯಾವುದೇ ಆಸಕ್ತಿ ವ್ಯಕ್ತಪಡಿಸದೇ ಇರುವುದಕ್ಕೆ ಈಜಿಪ್ಟ್‌ನಲ್ಲಿ ಪುರಾತನ ತಾಣಗಳ ಬಗ್ಗೆ ಟಿವಿಗಳಲ್ಲಿ ವಿಶೇಷ ಕಾರ್ಯಕ್ರಮ ನೀಡುವ ಝಾಹಿ ಹವಾಸ್ ಅಸಮಾಧಾನ ವ್ಯಕ್ತಪಡಿಸಿದ್ದರು. ಕೋಪದ ಭರದಲ್ಲಿ ಮೆಸ್ಸಿ ಅವರನ್ನು ಓರ್ವ ಮೂರ್ಖ ಎಂದು ನಿಂದಿಸಿದ್ದರು.

ಕಳೆದ ತಿಂಗಳು ಈಜಿಪ್ಟ್ ಪ್ರವಾಸ ಕೈಗೊಂಡಿದ್ದ ಮೆಸ್ಸಿಗೆ ಗಿಝಾ ಪಿರಾಮಿಡ್‌ನ ವೈಶಿಷ್ಟದ ಬಗ್ಗೆ ಹವಾಸ್ ವಿವರಣೆ ನೀಡಿದ್ದರು. ಟಿವಿ ಸಂದರ್ಶನದಲ್ಲಿ ಅವರಿಂದ ಪ್ರಶ್ನೆಯನ್ನು ನಿರೀಕ್ಷಿಸಿದ್ದರು. ಆದರೆ ಮೆಸ್ಸಿಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ.

‘‘ನಾನು ಪ್ರಾಚೀನತೆಯ ಬಗ್ಗೆ ವಿವರಣೆ ನೀಡಿದ್ದೆ. ಅವರ ಮುಖದಲ್ಲಿ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಅವರು ಸುಮ್ಮನೆ ಕುಳಿತ್ತಿದ್ದರು. ಅವರ ವರ್ತನೆ ಓರ್ವ ಮೂರ್ಖನ ರೀತಿಯಂತಿತ್ತು’’ ಎಂದು ಹವಾಸ್ ಹೇಳಿದ್ದಾರೆ.

ತಾನು ಮೆಸ್ಸಿಯ ಬಗ್ಗೆ ಅಪಾರ್ಥ ಮಾಡಿಕೊಂಡಿರುವುದಕ್ಕೆ ಮೆಸ್ಸಿ ಹಾಗೂ ಅವರ ಅಭಿಮಾನಿಗಳಲ್ಲಿ ಕ್ಷಮೆ ಕೋರುವೆ ಎಂದು ಮಂಗಳವಾರ ನೀಡಿರುವ ಹೇಳಿಕೆಯೊಂದರಲ್ಲಿ ಹವಾಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News