×
Ad

ಇಂಡಿಯನ್ ಓಪನ್ ಪ್ರಶಸ್ತಿಯನ್ನು ಉಳಿಸಿಕೊಂಡ ಎಸ್‌ಎಸ್‌ಪಿ ಚೌರಾಸಿಯಾ

Update: 2017-03-12 23:43 IST

ಹೊಸದಿಲ್ಲಿ, ಮಾ.12: ಇಂಡಿಯನ್ ಓಪನ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಎಸ್‌ಎಸ್‌ಪಿ ಚೌರಾಸಿಯಾ ಈ ಸಾಧನೆ ಮಾಡಿದ ಭಾರತದ ಎರಡನೆ ಗಾಲ್ಫರ್ ಎನಿಸಿಕೊಂಡಿದ್ದಾರೆ.

ಗುರ್ಗಾಂವ್‌ನಲ್ಲಿ ಡಿಎಲ್‌ಎಫ್ ಗಾಲ್ಫ್ ಕಂಟ್ರಿ ಕ್ಲಬ್‌ನಲ್ಲಿ ನಡೆದ ಇಂಡಿಯನ್ ಓಪನ್ ಗಾಲ್ಫ್ ಟೂರ್ನಿಯಲ್ಲಿ ಏಳು ಸ್ಟ್ರೋಕ್‌ಗಳ ಅಂತರದಿಂದ ಚೌರಾಸಿಯಾ ಜಯ ಸಾಧಿಸಿದ್ದಾರೆ.

69 ಗಾಲ್ಫರ್‌ಗಳಲ್ಲಿ 42 ಗಾಲ್ಫರ್‌ಗಳು 3ನೆ ಸುತ್ತಿಗೆ ತಲುಪಿದ್ದು ಇವರ ಪೈಕಿ ಚೌರಾಸಿಯಾ ಮೊದಲ ಸ್ಥಾನ ಪಡೆದರು. ಜ್ಯೋತಿ ರಾಂಧವ(2006,2007) ಬಳಿಕ ಸತತ ಇಂಡಿಯನ್ ಓಪನ್ ಪ್ರಶಸ್ತಿ ಜಯಿಸಿದ ಭಾರತದ 2ನೆ ಗಾಲ್ಫರ್ ಎನಿಸಿಕೊಂಡರು.

ಭಾರತ 3ನೆ ಬಾರಿ ಇಂಡಿಯನ್ ಓಪನ್ ಪ್ರಶಸ್ತಿ ಜಯಿಸಿದೆ. 2015ರಲ್ಲಿ ಅನಿರ್ಬನ್ ಲಹಿರಿ ಹಾಗೂ ಕಳೆದ ವರ್ಷ ಚೌರಾಸಿಯಾ ಈ ಪ್ರಶಸ್ತಿ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News