×
Ad

ಸಾನಿಯಾ ಜೋಡಿ ಕ್ವಾರ್ಟರ್ ಫೈನಲ್‌ಗೆ, ಪೇಸ್ ಔಟ್

Update: 2017-03-12 23:53 IST

ಇಂಡಿಯನ್ ವೇಲ್ಸ್, ಮಾ.12: ಎಟಿಪಿ ಇಂಡಿಯನ್ ವೇಲ್ಸ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಝಾ ಹಾಗೂ ಅವರ ಜೊತೆಗಾರ್ತಿ ಬಾರ್ಬೊರ ಸ್ಟ್ರೈಕೋವಾ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಆದರೆ, ಪುರುಷರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಹಾಗೂ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ನೇರ ಸೆಟ್‌ಗಳಿಂದ ಸೋತು ನಿರಾಸೆಗೊಳಿಸಿದ್ದಾರೆ.

ಪೇಸ್ ಹಾಗೂ ಡೆಲ್‌ಪೊಟ್ರೊ ಲಕ್ಸಂಬರ್ಗ್‌ನ ಗಿಲ್ಲೆಸ್ ಮುಲ್ಲರ್ ಹಾಗೂ ಅಮೆರಿಕದ ಸ್ಯಾಮ್ ಕ್ವೆರಿ ವಿರುದ್ಧ 3-6, 4-6 ನೇರ ಸೆಟ್‌ಗಳಿಂದ ಸೋತಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ-ಸ್ಟ್ರೈಕೋವಾ ಜೋಡಿ ಇಟಲಿಯ ಸಾರಾ ಇರ್ರಾನಿ ಹಾಗೂ ಪೊಲೆಂಡ್‌ನ ಅಲಿಜಾ ರೊಸೊಲ್ಕಾ ವಿರುದ್ಧ 6-2, 6-3 ನೇರ ಸೆಟ್‌ಗಳಿಂದ ಜಯ ಸಾಧಿಸಿದೆ.

ನಾಲ್ಕನೆ ಶ್ರೇಯಾಂಕದ ಸಾನಿಯಾ-ಸ್ಟ್ರೈಕೋವಾ ಕೇವಲ 64 ನಿಮಿಷಗಳ ಹೋರಾಟದಲ್ಲಿ ನೇರ ಸೆಟ್‌ಗಳಿಂದ ಜಯ ಸಾಧಿಸಿ ಅಂತಿಮ-8ರ ಘಟ್ಟ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News