ಮೂರನೆ ಕ್ರಿಕೆಟ್ ಟೆಸ್ಟ್: ಆಸ್ಟ್ರೇಲಿಯ ಮೊದಲ ಇನಿಂಗ್ಸ್ ನಲ್ಲಿ 451ಕ್ಕೆ ಆಲೌಟ್
Update: 2017-03-17 14:42 IST
ರಾಂಚಿ, ಮಾ.17: ಇಲ್ಲಿ ನಡೆಯುತ್ತಿರುವ ಮೂರನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯ 137.3 ಓವರ್‌ಗಳಲ್ಲಿ 451 ರನ್‌ಗಳಿಗೆ ಆಲೌಟಾಗಿದೆ.
ಟೆಸ್ಟ್‌ನ ಎರಡನೆ ದಿನವಾಗಿರುವ ಇಂದು ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್‌ವೆಲ್ ಚೊಚ್ಚಲ ಶತಕ (104) ದಾಖಲಿಸಿದ್ದಾರೆ.
ಸ್ಟೀವ್ ಸ್ಮಿತ್ ಅಜೇಯ 178 ರನ್(361ಎ, 17ಬೌ) ಗಳಿಸಿದರು.
ಎರಡನೆ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 299 ರನ್ ಗಳಿಸಿತ್ತು. ಸ್ಮಿತ್ 117 ಮತ್ತು ಮ್ಯಾಕ್ಸ್‌ವೆಲ್ 82 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಇಂದು ಆಟ ಮುಂದುವರಿಸಿ ಇವರು ಐದನೆ ವಿಕೆಟ್‌ಗೆ 191 ರನ್‌ಗಳ ಜೊತೆಯಾಟ ನೀಡಿದರು. ಮ್ಯಾಥ್ಯೂ ವೇಡ್ 37 ರನ್, ಓ ಕೀಫೆ 25 ರನ್ ಗಳಿಸಿ ಔಟಾದರು.
ಭಾರತದ ಪರ ರವೀಂದ್ರ ಜಡೇಜ 124ಕ್ಕೆ 5, ಉಮೇಶ್ ಯಾದವ್ 106ಕ್ಕೆ 3 ಮತ್ತು ಆರ್.ಅಶ್ವಿನ್ 114ಕ್ಕೆ 1 ವಿಕೆಟ್ ಹಂಚಿಕೊಂಡರು.