ಮೂರನೇ ಟೆಸ್ಟ್: ಭಾರತ 120/1
Update: 2017-03-17 17:38 IST
ರಾಂಚಿ, ಮಾ.17: ಇಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಮೊದಲ ಇನಿಂಗ್ಸ್‌ನಲ್ಲಿ ಎರಡನೇ ದಿನದಾಟದಂತ್ಯಕ್ಕೆ 40 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 120 ರನ್ ಗಳಿಸಿದೆ.
ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ 67 ರನ್(102ಎ, 9ಬೌ) ಗಳಿಸಿ ಔಟಾಗಿದ್ದಾರೆ.
ಮುರಳಿ ವಿಜಯ್ 42 ರನ್ ಮತ್ತು ಚೇತೇಶ್ವರ ಪೂಜಾರ 10 ರನ್ ಗಳಿಸಿ ಬ್ಯಾಟಿಂಗ್‌ನ್ನು ಮೂರನೇ ದಿನಕ್ಕೆ ಕಾಯ್ದಿರಿಸಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 137.3 ಓವರ್‌ಗಳಲ್ಲಿ 451 ರನ್‌ಗಳಿಗೆ ಆಲೌಟಾಗಿತ್ತು.