ಏಷ್ಯನ್ ರೇಸ್ ವಾಕ್ ಚಾಂಪಿಯನ್‌ಶಿಪ್: ಇರ್ಫಾನ್‌ಗೆ ಕಂಚು

Update: 2017-03-19 18:02 GMT

ನೊಮಿ(ಜಪಾನ್), ಆ.19: ರಾಷ್ಟ್ರೀಯ ದಾಖಲೆ ವೀರ ಕೆ.ಟಿ. ಇರ್ಫಾನ್ ಏಷ್ಯನ್ ರೇಸ್ ವಾಕ್ ಚಾಂಪಿಯನ್‌ಶಿಪ್‌ನ 20 ಕಿ.ಮೀ. ಪುರುಷರ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ.

ರವಿವಾರ ಇಲ್ಲಿ ನಡೆದ ಸ್ಪರ್ಧೆಯಲ್ಲಿ ಇರ್ಫಾನ್ 1 ಗಂಟೆ, 20 ನಿಮಿಷ ಹಾಗೂ 59 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಕೊರಿಯದ ಕಿಮ್ ಹ್ಯೂನ್-ಸಬ್(1:09:50) ಹಾಗೂ ಕಝಕ್‌ಸ್ತಾನದ ಜಾರ್ಜಿ ಶೆಕೊ(1:20:47) ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದ್ದಾರೆ.

27ರ ಹರೆಯದ ಇರ್ಫಾನ್ ಕಳೆದ ತಿಂಗಳು ನಡೆದ ನ್ಯಾಶನಲ್ ರೇಸ್ ವಾಕಿಂಗ್ ಚಾಂಪಿಯನ್‌ಶಿಪ್‌ನಲ್ಲಿ 1:22:43.48 ಸೆಕೆಂಡ್‌ನಲ್ಲಿ ಗುರಿ ತಲುಪಿ ಪ್ರಶಸ್ತಿ ಜಯಿಸಿದ್ದರು. ಇರ್ಫಾನ್ ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಈಗಾಗಲೇ ಅರ್ಹತೆ ಪಡೆದಿದ್ದಾರೆ.

ಮಹಿಳೆಯರ 20 ಮೀ. ರೇಸ್‌ವಾಕ್‌ನಲ್ಲಿ ಭಾರತದ ಪ್ರಿಯಾಂಕಾ 1:37:35 ನಿಮಿಷದಲ್ಲಿ ಗುರಿ ತಲುಪಿ ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಚೀನಾದ ವಾಂಗ್‌ನಾ(1:30:51) ಚಿನ್ನದ ಪದಕ ಜಯಿಸಿದರು. ಆತಿಥೇಯ ರಾಷ್ಟ್ರದ ಕುಮಿಕೊ ಒಕಾಡಾ(1:33:31) ಹಾಗೂ ಕೊರಿಯದ ಜಿಯೊನ್(1:34:35) ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News