ಖಾಯಂ ಸ್ಥಾನಮಾನ ಕಳೆದುಕೊಂಡ ಮುಂಬೈ

Update: 2017-03-19 18:07 GMT

ಹೊಸದಿಲ್ಲಿ, ಮಾ.19: ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟ ಆಡಳಿತಾಧಿಕಾರಿ ಸಮಿತಿ(ಸಿಒಎ) ಅಂತಿಮಗೊಳಿಸಿರುವ ಬಿಸಿಸಿಐನ ಹೊಸ ಸಂವಿಧಾನದ ಪ್ರಕಾರ ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್‌ನ ಅಧಿಕಾರ ಕೇಂದ್ರವಾಗಿದ್ದ ಮುಂಬೈ ಖಾಯಂ ಮತದಾನದ ಸ್ಥಾನಮಾನವನ್ನು ಕಳೆದುಕೊಂಡಿದೆ.

ಈಶಾನ್ಯ ರಾಜ್ಯಗಳಾದ ಮಣಿಪುರ, ಮೇಘಾಲಯ, ಮಿರೆರಾಂ, ನಾಗಾಲ್ಯಾಂಡ್, ಅರುಣಾಚಲಪ್ರದೇಶ, ಸಿಕ್ಕಿಂ ಪೂರ್ಣ ಸದಸ್ಯತ್ವ ಪಡೆದುಕೊಂಡಿದ್ದು, ಲೋಧಾ ಸಮಿತಿಯ ಸುಧಾರಣೆಯನ್ವಯ ಮತದಾನದ ಹಕ್ಕನ್ನು ಗಿಟ್ಟಿಸಿಕೊಂಡಿವೆ. ಇದೀಗ ಉತ್ತರಾಖಂಡ, ತೆಲಂಗಾಣ ರಾಜ್ಯಗಳು ಪೂರ್ಣ ಸದಸ್ಯತ್ವ ಪಡೆದುಕೊಂಡಿದೆ.

ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣ ಇತ್ಯರ್ಥವಾದ ಬಳಿಕ ಬಿಹಾರ ಕೂಡ ಮತದಾನದ ಹಕ್ಕು ಪಡೆಯಲಿದೆ. 40 ಬಾರಿಯ ರಣಜಿ ಚಾಂಪಿಯನ್ ಮುಂಬೈ ಇದೀಗ ಗುಜರಾತ್‌ನ ಬರೋಡಾ ಹಾಗೂ ಸೌರಾಷ್ಟ್ರದೊಂದಿಗೆ ಬಿಸಿಸಿಐನ ಸಹ ಸದಸ್ಯತ್ವವನ್ನು ಹೊಂದಿದ್ದು ಪ್ರತಿವರ್ಷ ಆವರ್ತನಾ ನಿಯಮದಂತೆ ಮತ ಚಲಾಯಿಸಲಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News